ADVERTISEMENT

ತಜ್ಞರ ವರದಿ ಆಧರಿಸಿ ತುಂಗಭದ್ರಾ ಜಲಾಶಯ ಗೇಟ್ ಬದಲಿಸುವ ಬಗ್ಗೆ ಕ್ರಮ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2024, 8:12 IST
Last Updated 22 ಸೆಪ್ಟೆಂಬರ್ 2024, 8:12 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಇತ್ತೀಚಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದ್ದು, ತಂಡ ನೀಡುವ ವರದಿಯ ಆಧಾರದ ಮೇಲೆ ಕ್ರಸ್ಟ್‌ ಗೇಟ್ ಬದಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು‌.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಿರುವ ಅವರು ಭಾನುವಾರ ತಾಲ್ಲೂಕಿನ ಗಿಣಗೇರಿಯಲ್ಲಿರುವ ಎರ್ ಸ್ಕ್ರಿಪ್ಟ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ADVERTISEMENT

ಕ್ರಸ್ಟ್ ಗೇಟ್ ಮುರಿದ‌ಹೋದ ಬಳಿಕ ಪೋಲಾಗಿದ್ದ ನೀರು ಮರಳಿ ಸಂಗ್ರಹವಾಗಿದ್ದು ಖುಷಿಯಾಗಿದೆ. ಈಗ 100 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಎರಡನೆ ಬೆಳೆಗೂ‌ ನೀರು ಲಭಿಸುವ ವಿಶ್ವಾಸವಿದೆ. 50 ವರ್ಷಗಳಾದಾಗಲೇ ಗೇಟ್ ಬದಲಿಸಬೇಕಾಗಿತ್ತು. ಈಗ 70 ವರ್ಷಗಳಾಗಿವೆ. ಇಷ್ಟು ವರ್ಷ ನಿರ್ವಹಣೆ ‌ಮಾಡಲಾಗಿದೆ. ಮುಂದೇನು ಮಾಡಬೇಕು ಎನ್ನುವುದನ್ನು ವರದಿ ಬಳಿಕ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಗೇಟ್ ‌ಕೊಚ್ಚಿ ಹೋದಾಗ ಎಲ್ಲ ಸಚಿವರು, ಶಾಸಕರು, ಅಧಿಕಾರಿಗಳು ನಿಗಾ ವಹಿಸಿ ಕೆಲಸ ಮಾಡಿದರು. ಕನ್ನಯ್ಯ ನಾಯ್ಡು ಶ್ರಮ ವಹಿಸಿದರು. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗಲಿಲ್ಲ. ಈಗ ನೀರು ಮರಳಿ ಸಂಗ್ರಹವಾಗಿದ್ದರಿಂದ ರೈತರ ಆತಂಕ ದೂರವಾಗಿದೆ ಎಂದರು.

ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ರಸ್ತೆ ದುರಸ್ತಿ ಕೆಲಸ ಮಾಡಲಿಲ್ಲ. ಈ ಸಲ ಮಳೆಯೂ ಆಗಿರುವ ಕಾರ, ರಸ್ತೆಗಳು ಹಾಳಾಗಿದ್ದು, ಅದಷ್ಟು ಬೇಗನೆ ದುರಸ್ತಿ ಮಾಡಲಾಗುವುದು ಎಂದರು.

ಶಾಸಕ ಮುನಿರತ್ನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ, ಜಮೀರ್ ಅಹ್ಮದ್, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.