ADVERTISEMENT

ಕನಕಗಿರಿ | ಬೆಳೆನಾಶ ಆರೋಪ: ಅರಣ್ಯ ಇಲಾಖೆ ವಿರುದ್ದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 15:50 IST
Last Updated 25 ನವೆಂಬರ್ 2023, 15:50 IST
ಕನಕಗಿರಿ ಸಮೀಪದ ಬಂಕಾಪುರ ಗ್ರಾಮದ ಸರ್ವೆ ನಂ-29ರಲ್ಲಿ ಬೆಳೆದ ಬೆಳೆಗಳನ್ನು ಅರಣ್ಯ ಇಲಾಖೆಯವರು ಜೆಸಿಬಿ ಯಂತ್ರದಿಂದ ಬೆಳೆಗಳನ್ನು ಶನಿವಾರ ಕಿತ್ತಿ ಹಾಕಿದರು
ಕನಕಗಿರಿ ಸಮೀಪದ ಬಂಕಾಪುರ ಗ್ರಾಮದ ಸರ್ವೆ ನಂ-29ರಲ್ಲಿ ಬೆಳೆದ ಬೆಳೆಗಳನ್ನು ಅರಣ್ಯ ಇಲಾಖೆಯವರು ಜೆಸಿಬಿ ಯಂತ್ರದಿಂದ ಬೆಳೆಗಳನ್ನು ಶನಿವಾರ ಕಿತ್ತಿ ಹಾಕಿದರು   

ಕನಕಗಿರಿ: ಸಮೀಪದ ಬಂಕಾಪುರ ಗ್ರಾಮದ ಸರ್ವೆ ನಂಬರ್ 29ರ 10 ಎಕರೆ ಹೊಲದಲ್ಲಿ ಬೆಳೆದ ಬೆಳೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ನಾಶ ಮಾಡಿದ್ದಾರೆ ಎಂದು ಗೊಲ್ಲರ (ಯಾದವ) ಸಮಾಜದ ತಾಲ್ಲೂಕು ಅಧ್ಯಕ್ಷ ನಿರುಪಾದಿ ಯಾದವ ಆರೋಪಿಸಿದ್ದಾರೆ.

ತಿಮ್ಮಪ್ಪ ಸೆಲ್ಲರ್ ಅವರು ಖರೀದಿಸಿದ ಭೂಮಿ ಇದಾಗಿದ್ದು ಅವರ ಮಕ್ಕಳು, ಮೊಮ್ಮಕ್ಕಳು ಭೂ ಸಾಗುವಳಿ ಮಾಡಾತ್ತಾ ಬಂದಿದ್ದಾರೆ. ಔಡಲ, ತೊಗರಿ ಬೆಳೆಯನ್ನು ಬಿತ್ತನೆ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಅಧಿಕಾರಿಗಳು ಮಾಡಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಜೆಸಿಬಿ ಬಳಸಿ ಬೆಳೆಗಳನ್ನು ಕಿತ್ತು ಹಾಕಿದ್ದಾರೆ. ಹೊಲ ಅರಣ್ಯ ಇಲಾಖೆಗೆ ಸೇರಿದ್ದು ಇದರಲ್ಲಿ ನಿಮ್ಮದು ಏನು ಇಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ADVERTISEMENT

ಹದಿನೈದು ದಿನ ಸಮಯ ಕೊಡಿ ಎಂದು ಪರಿ‌ ಪರಿಯಾಗಿ ವಿನಂತಿಸಿದರೂ ಕೇಳದೆ ಬೆಳೆ ನಾಶ ಪಡಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ‌ ಹರಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ವಲಯ ಅರಣ್ಯ ಅಧಿಕಾರಿ ಶಿವಕುಮಾರ ಮೇಟಿ ಮಾತನಾಡಿ ಸರ್ವೆ ನಂಬರ್-29ರ ಹತ್ತು ಎಕರೆ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಪಹಣಿ ಸಹ ಅರಣ್ಯ ಇಲಾಖೆಯ ಹೆಸರಿನಲ್ಲಿದೆ. ಭೂಮಿ ಒತ್ತುವರಿ ಮಾಡಿಕೊಂಡು ಬಂದು ಬಿತ್ತನೆ ಮಾಡಲಾಗುತ್ತಿತ್ತು. ಈ ಬಗ್ಗೆ ಕಳೆದ ಮೂರು ವರ್ಷಗಳಿಂದಲೂ ಸೂಚನೆ ನೀಡಿದರೂ ಒತ್ತುವರಿದಾರರು ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.