ಮುಸ್ಟೂರ (ಕಾರಟಗಿ): ಹಾವೇರಿ ಜಿಲ್ಲೆಯ ಕಂಚಾರಗಟ್ಟಿಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾತ್ರೆಯು ಜ.14 ಹಾಗೂ 15ರಂದು ನಡೆಯಲಿದೆ. ಜಿಲ್ಲೆಯ ಗಂಗಾಮತ, ಕಬ್ಬಲಿಗ ಸಮಾಜದವರು ಪಾಲ್ಗೊಳ್ಳಬೇಕು ಎಂದು ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುಸ್ಟೂರ, ಹೊಸಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗಂಗಾಮತ ಸಮಾಜವು 39 ವಿವಿಧ ಉಪ ಜಾತಿ ಹೆಸರಲ್ಲಿ ಹರಿದು ಹಂಚಿಹೋಗಿದೆ. ಅವರೆಲ್ಲರನ್ನೂ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಸೇರಿಸುವ ಉತ್ಸವವೂ ಇದಾಗಿದೆ. ಅಂಬಿಗರ ಚೌಡಯ್ಯರ 904ನೇ ಜಯಂತಿ, ಶಾಂತಮುನಿ ಸ್ವಾಮೀಜಿ ಅವರ 8ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯರ 8ನೇ ಪೀಠಾರೋಹಣದ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಸುಮಾರು 30 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದರೂ ನಮ್ಮದು ಅಸಂಘಟಿತ ಸಮಾಜವಾಗಿದೆ. ಎಲ್ಲ ಉಪ ಜಾತಿಗಳನ್ನು ಎಸ್‌ಟಿಗೆ ಸೇರಿಸುವಂತೆ ಆಗ್ರಹಿಸಲು ಸರ್ಕಾರದ ಮೇಲೆ ಒತ್ತಡ ಹಾಕುವ ಯತ್ನವೂ ಕಾರ್ಯಕ್ರಮದ್ದಾಗಿದ್ದು, ಪಾಲ್ಗೊಳ್ಳುವ ಮುಖ್ಯಮಂತ್ರಿಗಳಿಗೆ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ಶ್ರೀಗಳು ಹೇಳಿದರು.
ಗುರುಪೀಠದ ಉಪಾಧ್ಯಕ್ಷ ಮಂಜುನಾಥ ಪುಟಗನಳ್ಳಿ, ನಿರ್ದೇಶಕ ತಾಯಪ್ಪ ಕೋಟ್ಯಾಳ, ಗಂಗಾವತಿ ತಾಲ್ಲೂಕು ಅಧ್ಯಕ್ಷ ಈ.ಧನರಾಜ ಮಾತನಾಡಿದರು.
ಗಂಗಾಮತ ಸಮಾಜದ ಕಾರಟಗಿ ತಾಲ್ಲೂಕು ಅಧ್ಯಕ್ಷ ವೈ.ಯಂಕೋಬಣ್ಣ, ಗ್ರಾಮ ಘಟಕದ ಅಧ್ಯಕ್ಷ ವಾನಭದ್ರಪ್ಪ ವಾಲೀಕಾರ ಪ್ರಮುಖರಾದ ಶಿವರಾಮಪ್ಪ ಬಾಗೋಡಿ, ಶರಣಪ್ಪ ರಾಮಸಾಗರ, ಭೈರಿ ದೊಡ್ಡಬಸಪ್ಪ, ಈರಪ್ಪ ಅಗಸಿಮುಂದಲ, ಕೊಮಾರೆಪ್ಪ ಬಾವಿಕಟ್ಟಿ, ಸಣ್ಣ ಅಯ್ಯಪ್ಪ ಗೂಳಿ, ಫಕೀರಪ್ಪ ಕೊಂಡಿ, ರಾಮಣ್ಣ ದಮ್ಮೂರು, ಸುರೇಶ ಗಂಗಲ್, ವಿರುಪಣ್ಣ ಗೋಮರ್ಶಿ, ಗಣೇಶ್ ವಾಲೀಕಾರ, ರವಿ ಮುಸ್ಟೂರು, ಶಿವಪುತ್ರಪ್ಪ, ಜಗದೀಶ ಕೊಂಡಿ, ನಿರುಪಾದಿ, ಮಲ್ಲಿಕಾರ್ಜುನ, ರಾಕೇಶ ಹೊಸಳ್ಳಿ, ಹನುಮೇಶಪ್ಪ ಕುಂಟೋಜಿ, ಕನಕಪ್ಪ ಸೊಂಡೆ, ಚಂದ್ರಪ್ಪ, ಮರಿಯಪ್ಪ ಡಾಣಿ, ಮಹಾದೇವಪ್ಪ ಮೋಟಿ, ಸಿದ್ದು ಪುಟಗಿ ಇದ್ದರು.
ಯುವ ಮುಖಂಡ ಶರಣಪ್ಪ ಕಾಯಿಗಡ್ಡಿ, ಸಿದ್ದು ಪುಟಗಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.