ADVERTISEMENT

ಅಂಜನಾದ್ರಿ: ₹34.86 ಲಕ್ಷ ಹುಂಡಿ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:27 IST
Last Updated 21 ಫೆಬ್ರುವರಿ 2024, 15:27 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು   

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಬುಧವಾರ ಎಣಿಕೆ ಮಾಡಲಾಯಿತು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗ್ರೇಡ್-2 ತಹಶೀಲ್ದಾರ ಮಹಾಂತಗೌಡ ನೇತೃತ್ವದಲ್ಲಿ ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ₹34,86,965 (ಜ.01 ರಿಂದ ಫೆ.21ರವರೆಗೆ) ಹಣ ಸಂಗ್ರಹವಾಗಿದೆ.

ಇದರಲ್ಲಿ ಎರಡು ವಿದೇಶಿ ನೋಟು (ನೇಪಾಳ), ಒಂಭತ್ತು ವಿದೇಶಿ ನಾಣ್ಯಗಳು ( ತಲಾ ಒಂದು ಯುನೈಟೆಡ್ ಕಿಂಗ್‌ಡಂ, ಯುರೋಪ್, ಆಸ್ಟ್ರೇಲಿಯಾ, 6 ನೇಪಾಳ ದೇಶದ ನಾಣ್ಯಗಳು ಸಂಗ್ರಹವಾಗಿವೆ.

ADVERTISEMENT

ಇನ್ನೂ ಕಳೆದ ಬಾರಿ (ಜ.01) ರಂದು ಹುಂಡಿಹಣ ಎಣಿಕೆ ಮಾಡಿದ ವೇಳೆಯಲ್ಲಿ ₹27,71,761 ಹಣ ಸಂಗ್ರಹವಾಗಿತ್ತು. ಈ ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆದಿತ್ತು.

ಶಿರಸ್ತೇದಾರ ರವಿಕುಮಾರ ನಾಯಕವಾಡಿ, ಅನಂತ ಜೋಶಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ತಹಶೀಲ್ದಾರ್‌ ಕಾರ್ಯಾಲಯದ ಸಿಬ್ಬಂದಿ ಶ್ರೀಕಂಠ, ಗುರುರಾಜ, ಅನ್ನಪೂರ್ಣ, ಪ್ರಥಮ ದರ್ಜೆ ಸಹಾಯಕ ಮಹ್ಮದ ರಫೀಕ್, ಸುಧಾ, ಶ್ರಿರಾಮ ಜೋಷಿ, ಗಾಯತ್ರಿ ಕವಿತಾ, ಸೈಯ್ಯದ್ ಮುರ್ತುಜಾ, ಸೌಭಾಗ್ಯ, ಕವಿತಾ.ಕೆ, ಮಂಜುನಾಥ ದಮ್ಮಾಡಿ, ಅಸ್ಲಾಂ ಪಟೇಲ್, ಮಹಾಲಕ್ಷ್ಮಿ ಪಿ, ಸಾಣಾಪುರ ಪಿ.ಕೆ.ಜಿ.ಬಿ ಬ್ಯಾಂಕ್ ಸಿಬ್ಬಂದಿ ಸುನಿಲ್, ರಾಜಶೇಖರ್, ದೇವಸ್ಥಾನ ವ್ಯವಸ್ಥಾಪಕ ವೆಂಕಟೇಶ ಸೇರಿ ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಹುಂಡಿಹಣ ಎಣಿಕೆಯಲ್ಲಿ ಪತ್ತೆಯಾದ ವಿದೇಶಿ ನಾಣ್ಯಗಳು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಹುಂಡಿಹಣ ಎಣಿಕೆಯಲ್ಲಿ ಪತ್ತೆಯಾದ ವಿದೇಶಿ ನೋಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.