ADVERTISEMENT

ಸಾಲದ ನೆರವಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:09 IST
Last Updated 5 ಜೂನ್ 2024, 16:09 IST

ಕೊಪ್ಪಳ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2024-25ನೇ ಸಾಲಿನ ಮುದ್ರಾ ಯೋಜನೆಯಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಬ್ಯಾಂಕ್‌ನಿಂದ ಸಾಲದ ನೆರವಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಮಗ್ಗ ಖರೀದಿಸಲು ಅಥವಾ ದುಡಿಮೆ ಬಂಡವಾಳಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆಯಲು ಜಿಲ್ಲೆಗೆ 30 ಗುರಿ ನಿಗದಿಪಡಿಸಲಾಗಿದ್ದು, ಪ್ರತಿ ಫಲಾನುಭವಿಗೆ ₹50 ಸಾವಿರ ಪಡೆಯಲು ಅವಕಾಶವಿದೆ. ನೇಕಾರರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ ಇಲ್ಲಿಗೆ ಸಂಪರ್ಕಿಸಿ. ಇನ್ನಷ್ಟು ಮಾಹಿತಿಗೆ 08539-295469 ಸಂಪರ್ಕಿಸಬಹುದು.

ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ: ಪ್ರವೇಶ ಪ್ರಾರಂಭ

ADVERTISEMENT

ಕೊಪ್ಪಳ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ 2024-25ನೇ ಸಾಲಿಗೆ ಪ್ರವೇಶ ಆರಂಭವಾಗಿವೆ.

ಮಾನಸಿಕ ನ್ಯೂನ್ಯತೆವುಳ್ಳ ಮಕ್ಕಳಿಗೆ ಶಿಕ್ಷಣ, ಪುನಶ್ಚೇತನ ಸೌಲಭ್ಯ, ಮಾನಸಿಕ ಆರೋಗ್ಯ ತಪಾಸಣೆ, ಪಾಲಕರಿಗೆ ಕಾರ್ಯಾಗಾರ, ವೈದ್ಯಕೀಯ ಸೇವೆಗಳು, ಸಮವಸ್ತ್ರ ಮತ್ತು ವಸತಿ ಸೌಲಭ್ಯ ಎಲ್ಲವೂ ಮಕ್ಕಳಿಗೆ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕ ಪ್ರಭು ಹಿರೇಮಠ (92413 72265) ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ತಿಳಿಸಿದ್ದಾರೆ.

ವಿವಿಧ ತರಬೇತಿಗಳಿಗೆ ಅರ್ಜಿ

ಕೊಪ್ಪಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಮತ್ತು ಮಹಿಳಾ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

30 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ಮತ್ತು ಮಹಿಳಾ ಹೊಲಿಗೆ ತರಬೇತಿಯನ್ನು ಊಟ ಮತ್ತು ವಸತಿಯೊಂದಿಗೆ ಕೊಡಲಾಗುತ್ತದೆ. ಕನಿಷ್ಠ ಎಂಟನೇ ತರಗತಿ ಉತ್ತೀರ್ಣರಾದ 18 ರಿಂದ 45 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು.

ಜೂನ್ 11ರಂದು ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಜೂ. 12ರಿಂದ ತರಬೇತಿ ಆರಂಭವಾಗಲಿದೆ. ಆಸಕ್ತರು ದಾಖಲೆಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 08539-231038, 9483618178, 9481085217 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.