ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನಯಾನ ಭಾಗ್ಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 20:09 IST
Last Updated 23 ನವೆಂಬರ್ 2024, 20:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಪ್ಪಳ: ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅತ್ಯಂತ ಕಡಿಮೆ ಹಣದಲ್ಲಿ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ಭಾಗ್ಯ ಲಭಿಸಿದೆ.

ಈ ಶಾಲೆಯ 34 ವಿದ್ಯಾರ್ಥಿಗಳು, ಮೂವರು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಐದು ಶಿಕ್ಷಕರು ಡಿ. 6ರಂದು ಬಳ್ಳಾರಿ ಜಿಲ್ಲೆಯ ಜಿಂದಾಲ್‌ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ತೆರಳುವರು. ಅಲ್ಲಿ ಎರಡು ದಿನ ವಿವಿಧ ಸ್ಥಳಗಳನ್ನು ವೀಕ್ಷಿಸಿ ರೈಲಿನ ಮೂಲಕ ವಾಪಸ್‌ ಬರಲಿದ್ದಾರೆ.

ADVERTISEMENT

ಸದ್ಯಕ್ಕೆ ಪ್ರತಿ ವಿದ್ಯಾರ್ಥಿಯಿಂದ ₹2,500 ಸಂಗ್ರಹಿಸಲಾಗಿದೆ. ಉಳಿದ ಹಣವನ್ನು ಶಾಲೆಯ ಎಲ್ಲ ಶಿಕ್ಷಕರು, ಗ್ರಾಮ ಪಂಚಾಯಿತಿ, ಗ್ರಾಮದ ಸುತ್ತಮುತ್ತ ಇರುವ ಖಾಸಗಿ ಕಂಪನಿಗಳು ದೇಣಿಗೆ ನೀಡಿವೆ. ಮತ್ತಷ್ಟು ಹಣವನ್ನು ಕ್ಷೇತ್ರದ ಶಾಸಕ ಹಾಗೂ ಸಂಸದರು ನೀಡಲಿರುವುದರಿಂದ ಮಕ್ಕಳ ವಿಮಾನಯಾನದ ಕನಸಿಗೆ ರೆಕ್ಕೆ ಮೂಡಿದೆ.

‘ದೇಣಿಗೆ ನೀಡುವುದಾಗಿ ಜನಪ್ರತಿನಿಧಿಗಳು ತಿಳಿಸಿದ್ದಾರೆ. ಕಂಪನಿಗಳಿಂದ ಹಣ ಬಂದಿದ್ದರಿಂದ ಈಗಾಗಲೇ ವಿಮಾನದ ಟಿಕೆಟ್‌ ಬುಕ್‌ ಮಾಡಲಾಗಿದೆ. ಒಂದು ವೇಳೆ ಹಣ ಉಳಿದರೆ ವಿದ್ಯಾರ್ಥಿಗಳಿಗೆ ಅವರ ಹಣ ವಾಪಸ್‌ ಕೊಡುತ್ತೇವೆ. ಸರ್ಕಾರಿ ಶಾಲೆಯ ಮಕ್ಕಳಿಗೂ ಸಣ್ಣ ವಯಸ್ಸಿನಲ್ಲಿಯೇ ವಿಮಾನಯಾನದ ಅನುಭವ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆ ರೂಪಿಸಿದ್ದೇವೆ’ ಎಂದು ಶಾಲೆಯ ಶಿಕ್ಷಕ ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.