ADVERTISEMENT

ಕೊಪ್ಪಳ | ರಸ್ತೆ ಕೆಸರಿನಲ್ಲಿ ಸಿಲುಕಿದ ಬಸ್: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:45 IST
Last Updated 10 ಜುಲೈ 2024, 5:45 IST
<div class="paragraphs"><p>ರಸ್ತೆ ಕೆಸರಿನಲ್ಲಿ ಸಿಲುಕಿದ ಬಸ್</p></div>

ರಸ್ತೆ ಕೆಸರಿನಲ್ಲಿ ಸಿಲುಕಿದ ಬಸ್

   

– ಪ್ರಜಾವಾಣಿ ಚಿತ್ರ

ಕೊಪ್ಪಳ: ತಾಲ್ಲೂಕಿನ ಅಳವಂಡಿ ಸಮೀಪದ ಹೈದರನಗರ ಗ್ರಾಮದಲ್ಲಿ ಬುಧವಾರ ಸರ್ಕಾರಿ ಬಸ್ ರಸ್ತೆಯ ಕೆಸರಿನಲ್ಲಿ ಸಿಲುಕಿದ್ದು ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಪರದಾಡಿದರು.

ADVERTISEMENT

ಹೈದರನಗರ ಗ್ರಾಮದಲ್ಲಿ ರಸ್ತೆಗಳು ಹದೆಗೆಟ್ಟಿದ್ದು, ಸಂಚಾರ ನಿತ್ಯ ದುಸ್ತರವಾಗಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆಗೆ ರಸ್ತೆಗಳು ದೊಡ್ಡ ಹೊಂಡಗಳಾಗಿ ಪರಿವರ್ತನೆಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳ ಪರದಾಟ

ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಮಳೆ ಬಂದರೆ ಈ ರಸ್ತೆ ನೀರು ತುಂಬಿ ಕೆರೆಯಾಗಿ ನಿರ್ಮಾಣವಾಗಿ ನಂತರ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಈ ವೇಳೆ ವಾಹನ ಸವಾರರು ಜಾರಿ ಬೀಳುವುದು ಕಟ್ಟಿಟ್ಟ ಬುತ್ತಿಯಾಗಿದೆ .

ಬಸ್ ಸಿಲುಕಿದ ಪರಿಣಾಮ ಮುಂದಕ್ಕೆ ಹೋಗಲಾಗದೆ ವಿದ್ಯಾರ್ಥಿಗಳು ಪರದಾಡಿದರು.

ಅಳವಂಡಿಯಿಂದ ನಿಲೋಗಿಪುರಕ್ಕೆ ಹೋಗುವಾಗ ಹೈದರನಗರ ಗ್ರಾಮದಲ್ಲಿ ಬಸ್ ಕೆಸರಿನಲ್ಲಿ ಸಿಲುಕಿತು. ಈ ಬಸ್ ನಿಲೋಗಿಪುರಕ್ಕೆ ಹೋಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಅಳವಂಡಿಗೆ ತೆರಳಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.