ADVERTISEMENT

ಧರ್ಮ ಒಡೆದು ಆಳುವ ಪಕ್ಷ ಕಾಂಗ್ರೆಸ್‌: ಜಯಮಾಲಾ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 11:45 IST
Last Updated 19 ಏಪ್ರಿಲ್ 2019, 11:45 IST
 ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ  ಬಿಜೆಪಿ ಶಾಸಕ ಸಿ. ಟಿ. ರವಿ ಅವರನ್ನು  ಮುಖಂಡರು  ಶುಕ್ರವಾರ ಸನ್ಮಾನಿಸಿದರು
 ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ  ಬಿಜೆಪಿ ಶಾಸಕ ಸಿ. ಟಿ. ರವಿ ಅವರನ್ನು  ಮುಖಂಡರು  ಶುಕ್ರವಾರ ಸನ್ಮಾನಿಸಿದರು   

ಕನಕಗಿರಿ: ಕುಂಬಳಿಕಾಯಿ ಕಳ್ಳ ಎಂದರೆ ಸಚಿವೆ ಡಾ. ಜಯಮಾಲಾ ಹೆಗಲು ಮುಟ್ಟಿಕೊಂಡಿದ್ದೇಕೆ ಎಂದು ಬಿಜೆಪಿ ಶಾಸಕ ಸಿ. ಟಿ. ರವಿ ಪ್ರಶ್ನಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರಿಗೆ ಮತ ಹಾಕದವರು ತಾಯ್ಗಂಡರು’ ಎಂಬ ಹೇಳಿಕೆಗೆ ಜಯಮಾಲಾ ಏಕೆ ಉತ್ತರಿಸಿದ್ದಾರೆ ಎಂಬುದು ತಿಳಿಯದು ದ್ರೋಹ ಬಗೆಯುವವರ ಬಗ್ಗೆ ಈ ಹೇಳಿಕೆ ನೀಡಿದ್ದು ಈಗಲೂ ಅದಕ್ಕೆ ಬದ್ದನಾಗಿರುವೆ ಆದರೆ ಅವರು ಏಕೆ ಅದನ್ನು ತಮಗೆ ಅನ್ವಯ ಮಾಡಿಕೊಂಡರು ತಿಳಿಯದು ಎಂದು ಹೇಳಿದರು.

ಸುಳ್ಳು ಹೇಳುವುದೆ ಕಾಂಗ್ರೆಸ್‌ನವರ ಕೆಲಸವಾಗಿದೆ, ಶೀಘ್ರ ಕಾಂಗ್ರೆಸ್‌ ಕಚೇರಿಗೆ ಸತ್ಯ ಹರಿಶ್ವಂದ್ರ ಪುಸ್ತಕವನ್ನು ಕೊರಿಯರ್‌ ಮೂಲಕ ಕಳಿಸುವೆ. ಈ ಪುಸ್ತಕವನ್ನಾದರೂ ಓದಿ ಕಾಂಗ್ರೆಸ್‌ನವರು ಸತ್ಯವನ್ನು ಮಾತನಾಡುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ADVERTISEMENT

ಜಾತಿ, ಧರ್ಮವನ್ನು ಒಡೆದು ಆಳುವ ಪಕ್ಷ ಎಂದರೆ ಅದು ಕಾಂಗ್ರೆಸ್‌ ಮಾತ್ರ ಎಂದು ಅವರು ಹೇಳಿದರು.

ಎಪಿಎಂಸಿ ನಿರ್ದೇಶಕ ದೇವಪ್ಪ ತೋಳದ, ಮಾಜಿ ಅಧ್ಯಕ್ಷ ಡಾ. ಅರವಟಗಿಮಠ, ನಗರ ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಟ್ಟಣ ಪಂಚಾಯಿತಿ ಸದಸ್ಯ ರವೀಂದ್ರ ಸಜ್ಜನ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಭಾವಿಕಟ್ಟಿ, ಶಕ್ತಿ ಕೇಂದ್ರದ ಅಧ್ಯಕ್ಷ ವಾಗೀಶ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.