ADVERTISEMENT

ಕ್ಷಯ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅಗತ್ಯ: ನರಸಪ್ಪ ಎನ್.

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 5:23 IST
Last Updated 21 ಜುಲೈ 2023, 5:23 IST
ಕಾರಟಗಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಮ್ಮ ನಡೆ ಕ್ಷಯ ಮುಕ್ತದೆಡೆಗೆ ಕಾರ್ಯಕ್ರಮಕ್ಕೆ ತಾ.ಪಂ ಇಒ ನರಸಪ್ಪ. ಎನ್ ಚಾಲನೆ ನೀಡಿದರು
ಕಾರಟಗಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಮ್ಮ ನಡೆ ಕ್ಷಯ ಮುಕ್ತದೆಡೆಗೆ ಕಾರ್ಯಕ್ರಮಕ್ಕೆ ತಾ.ಪಂ ಇಒ ನರಸಪ್ಪ. ಎನ್ ಚಾಲನೆ ನೀಡಿದರು   

ಕಾರಟಗಿ: ‘ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಜಾಗೃತಿಗೊಳಿಸಬೇಕು. ಕ್ಷಯ ರೋಗಿಗಳಿಗೆ ಉತ್ತಮ ಚಿಕಿತ್ಸೆ, ನಮ್ಮವರೆಂಬ ಆತ್ಮೀಯ ಭಾವನೆಯಲ್ಲಿ ಸದಾ ಬೆರೆತು, ಅವರು ಉತ್ತಮ ಜೀವನ ನಡೆಸಲು ಮುಕ್ತ ಅವಕಾಶ ಮಾಡಿಕೊಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ನರಸಪ್ಪ ಎನ್. ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ನಮ್ಮ ನಡೆ ಕ್ಷಯ ಮುಕ್ತ ಕೊಪ್ಪಳ ಕಡೆ, ಕ್ಷಯರೋಗ ನಿರ್ಮೂಲನಕ್ಕೆ ಪಣ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಯ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಲಕ್ಷ್ಮಣ ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ, ಸೂಕ್ತ ಚಿಕಿತ್ಸೆ ಪಡೆದು, ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಬೇರೆಯವರಿಗೆ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. 2025 ರೊಳಗೆ ಕ್ಷಯ ಮುಕ್ತ ದೇಶ ನಿರ್ಮಾಣ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕು ಎಂದು ಹೇಳಿದರು.

ADVERTISEMENT

ತಾ.ಪಂ ಸಹಾಯಕ ನಿರ್ದೇಶಕಿ ವೈ. ವನಜಾ ಮಾತನಾಡಿ, ‌‘ಕ್ಷಯರೋಗ ನಿರ್ಮೂಲನೆಯ ನಿಮಿತ್ತ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರೀಕ್ಷೆ, ಚಿಕಿತ್ಸೆ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

ಬೇವಿನಹಾಳ ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ ಗುರಿಕಾರ, ಕ್ಷಯರೋಗದ ಲಕ್ಷ್ಮಣ, ಸೂಕ್ತ ಚಿಕಿತ್ಸೆಯ ಮಾಹಿತಿ ನೀಡಿದರು.

ತಾಲ್ಲೂಕು ಸಂಯೋಜಕ ನಿರುಪಾದಿ ಅರಳಿಗನೂರು, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪರಶುರಾಮ, ಸಮುದಾಯ ಆರೋಗ್ಯ ಕೇಂದ್ರದ ಸಂಯೋಜಕ ದೇವರಾಜ್, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.