ADVERTISEMENT

ಕೊಪ್ಪಳ | ಅಂಗನವಾಡಿಯಲ್ಲಿ ಅವ್ಯವಸ್ಥೆ: ಉಪನಿರ್ದೇಶಕ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:39 IST
Last Updated 5 ಅಕ್ಟೋಬರ್ 2024, 15:39 IST
<div class="paragraphs"><p>ಅಮಾನತು</p></div>

ಅಮಾನತು

   

ಕೊಪ್ಪಳ: ಜಿಲ್ಲೆಯ ಅಂಗನವಾಡಿಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಕಾರಣ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಿಲ್ಲೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತು ಮಾಡಲಾಗಿದೆ.

ಮೊಟ್ಟೆ ಮಾಯ ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ತಾಣಗಳಲ್ಲಿ ಪ್ರಕಟವಾದ ವರದಿ, ಅಂಗನವಾಡಿ ಚಾವಣೆ ಕುಸಿದು ನಾಲ್ಕು ಮಕ್ಕಳಿಗೆ ಗಾಯ ಮತ್ತು ಹೋಟೆಲ್‌ನಲ್ಲಿ ಅಂಗನವಾಡಿ ಮಸಾಲೆ ಪ್ರತ್ಯಕ್ಷ ಈ ವರದಿಗಳಿಗೆ ಕಾರಣ ಕೇಳಿ ಹಿಂದೆ ನೋಟಿಸ್‌ ಜಾರಿ ಮಾಡಲಾಗಿತ್ತು.

ADVERTISEMENT

ಜಿಲ್ಲೆಯ ಸೆಷನ್ಸ್‌ ನ್ಯಾಯಾಧೀಶರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೇಂದ್ರಗಳಲ್ಲಿ ಶುಚಿತ್ವ, ಮೂಲ ಸೌಕರ್ಯಗಳ ಕೊರತೆ, ಮಕ್ಕಳಿಗೆ ನೀಡಲಾಗಿರುವ ಪ್ರೀಸ್ಕೂಲ್‌ ಕಿಟ್‌ಗಳನ್ನು ಬಳಸದೇ ಯಥಾಸ್ಥಿತಿಯಲ್ಲಿ ಇಟ್ಟಿರುವುದು, ಮಕ್ಕಳಿಗೆ ಒದಗಿಸಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರ ತಯಾರಿಕೆ ಮತ್ತು ಸಂಗ್ರಹಣೆ ಕುರಿತು ಕ್ಷೇತ್ರ ಸಿಬ್ಬಂದಿಗೆ ತಿಳಿವಳಿಕೆ ನೀಡದಿರುವುದು ಹೀಗೆ ಅನೇಕ ಲೋಪಗಳು ಕಂಡುಬಂದಿವೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

‘ತಿಪ್ಪಣ್ಣ ಸಿರಸಗಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪದೇ ಪದೇ ತೀವ್ರ ತೆರನಾದ ಕರ್ತವ್ಯ ಲೋಪ ಎಸಗಿದ್ದು, ಇಲಾಖೆ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಇವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್‌. ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.