ಗಂಗಾವತಿ: ನಗರದ ಹೊರವಲಯದ ಸಿದ್ದಿಕೇರಿ ಸಮೀಪದ ಹೊಲದಲ್ಲಿ ಹಾಕಿದ್ದ ಕುರಿಹಟ್ಟಿ ಮೇಲೆ ಮೂರು ಚಿರತೆಗಳು ಮಂಗಳವಾರ ಬೆಳಗಿನ ಜಾವ ದಾಳಿ ಮಾಡಿ, 32 ಕುರಿಗಳನ್ನು ಕೊಂದು ಹಾಕಿ, 8 ಕುರಿಗಳನ್ನು ಹೊತ್ತು ಕೊಂಡು ಹೋದ ಘಟನೆ ನಡೆದಿದೆ.
ಯಮನೂರಪ್ಪ ನಾಯಕ ಎಂಬುವವರಿಗೆ ಸೇರಿದ ಕುರಿಹಿಂಡನ್ನು ಹೊಲದಲ್ಲಿ ಹಟ್ಟಿ ಹಾಕಿ ಕೂಡಿಹಾಕಲಾಗಿತ್ತು. ಬೆಳಗಿನ ಜಾವ ಕುರಿಗಳ ಮೇಲೆ ದಾಳಿ ಮಾಡಿದ ಚಿರತೆಗಳು ಕುರಿ ಮರಿಗಳನ್ನು ಕೊಂದು ಹಾಕಿವೆ. ಚಿರತೆ ದಾಳಿ ವೇಳೆ ಸ್ಥಳದಲ್ಲಿದ್ದ ಕುರಿ ಮಾಲೀಕರು ಹಾಗೂ ಆಳುಗಳು ಭಯಭೀತರಾಗಿ ಓಡಿಹೋಗಿದ್ದು, ಕುರಿಗಾರರಿಗೆ ಅಪಾರ ನಷ್ಟವಾಗಿದೆ.
ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿ, ಕುರಿಗಾರರಿಗೆ ಯಾವುದು ಕಾರಣಕ್ಕೆ ಅನ್ಯಾಯವಾಗದಂತೆ ಪರಿಹಾರ ಒದಗಿಸುವುದಾಗಿ ತಿಳಿಸಿದರು. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚಿಸಿದರು. ಜೊತೆಗೆ ಈ ಭಾಗದಲ್ಲಿ ಬೆಳಗ್ಗಿನ ಜಾವ ಹಾಗೂ ಸಂಜೆಹೊತ್ತು ವಾಕಿಂಗ್ ಬರುವರರು ಬಹಳ ಎಚ್ಚರಿಕೆಯಿಂದ ಇರವಂತೆ ಸೂಚಿಸಿದರು.
ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ, ಅರಣ್ಯಾಧಿಕಾರಿ ಶಿವರಾಜ್ ಮೇಟಿ, ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ, ಪ್ರಮುಖರಾದ ಹನುಮಂತಪ್ಪ ನಾಯಕ, ಯಂಕಪ್ಪ ಕಟ್ಟಿಮನಿ, ಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.