ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಸಮೀಪ ತುಂಗಾಭದ್ರ ನದಿಗೆ ಅಪಾರ ಪ್ರಮಾಣ ನೀರು ಹರಿಬಿಟ್ಟ ಕಾರಣ ಚಿಕ್ಕಜಂತಕಲ್ ಗ್ರಾಮಸ್ಥರು ಶುಕ್ರವಾರ ಅಂತ್ಯ ಸಂಸ್ಕಾರ ನಡೆಸಲು ಪರದಾಡಿದ್ದಾರೆ.
ಚಿಕ್ಕಜಂತಕಲ್ ನದಿಪಾತ್ರದ ಗ್ರಾಮವಾಗಿದ್ದು, ಜನರು ಮೃತಪಟ್ಟರೆ ನದಿಪಾತ್ರ ದಲ್ಲೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇದೀಗ ನದಿಗೆ ಅಪಾರ ನೀರು ಹರಿಬಿಟ್ಟಿದ್ದು, ಅಂತ್ಯ ಸಂಸ್ಕಾರದ ಸ್ಥಳ ಜಲಾವೃವಾಗಿ ಮೃತರನ್ನ ಹೂಳಲು ತೊಂದರೆಯಾಗಿದೆ.
ನದಿಪಾತ್ರದಲ್ಲೆ 14 ಸಮಾಜದವರು ಅಂತ್ಯ ಸಂಸ್ಕಾರ ಮಾಡುತ್ತಿದ್ದು, ಜಾಗದ ಅಭಾವ ಸಾಕಷ್ಟಿದೆ. ತಾಲ್ಲೂಕು ಆಡಳಿತ ನದಿ ಪಾತ್ರದಲ್ಲೆ ರುದ್ರಭೂಮಿ ಸ್ಥಳ ನೀಡಿದ್ದು, ನೀರು ಬಂದಾಗ ಗ್ರಾಮಸ್ಥರ ಪರಿಸ್ಥಿತಿ ಹೇಳಲು ತೀರದಾಗಿದೆ.
ಮೃತಪಟ್ಟಾಗ ನದಿಗೆ ನೀರು ಬಂದರು ಅನಿವಾರ್ಯವಾಗಿ ಮೃತದೇಹವನ್ನ ನದಿಪಾತ್ರದಲ್ಲೆ ಅಂತ್ಯ ಸಂಸ್ಕಾರ ಮಾಡ ಬೇಕಾಗುತ್ತಿದೆ. ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ವೈ.ಮಂಜುನಾಥ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.