ADVERTISEMENT

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:31 IST
Last Updated 29 ಸೆಪ್ಟೆಂಬರ್ 2024, 15:31 IST
ವೀರೇಶ ಮಹಾಂತಯ್ಯನಮಠ
ವೀರೇಶ ಮಹಾಂತಯ್ಯನಮಠ   

ಕೊಪ್ಪಳ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ, ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ ಬಳಸಿರುವ ಪದಬಳಕೆ ಸರಿಯಿಲ್ಲ. ಕೂಡಲೇ ಅವರು ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಈ ರಾಜ್ಯ ಕಂಡ ಜನಪರ, ರೈತಪರ ಸಿಎಂ ಆಗಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಕಾರ್ಯಗಳನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಕುಮ್ಮುಕ್ಕಿನಿಂದಲೇ ಅಧಿಕಾರಿಗಳು ತಮ್ಮ ಕೆಲಸದ ಮಿತಿ ಮೀರಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಲೋಕಾಯುಕ್ತ ಎಡಿಜಿಪಿಗೆ ಸರ್ವೀಸ್ ಕಂಡಕ್ಟ್ ನಿಯಮದ ಬಗ್ಗೆ ಜ್ಞಾನವಿದ್ದರೇ ತಕ್ಷಣ ಕ್ಷಮಾಪಣೆ ಕೇಳಬೇಕು. ಕುಮಾರಸ್ವಾಮಿ ಅವರು ಎಂದಿಗೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಪದ ಬಳಸಿದವರಲ್ಲ. ಅಲ್ಲದೆ, ಎಡಿಜಿಪಿ ಬಗ್ಗೆಯೂ ಎಲ್ಲಿಯೂ ಏಕವಚನ ಪದ ಪ್ರಯೋಗ ಮಾಡಿಲ್ಲ. ಇದು ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗಲಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.