ADVERTISEMENT

ಮುಸ್ಲಿಂ ಕುಟುಂಬದಿಂದ ಲಕ್ಷ್ಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 5:53 IST
Last Updated 25 ಅಕ್ಟೋಬರ್ 2022, 5:53 IST
ಕುಕನೂರಿನ ಜಿಂದುಸಾಬ್ ಅವರು ಡಾಬಾದಲ್ಲಿ ಲಕ್ಷ್ಮಿಪೂಜೆ ಮಾಡುತ್ತಿರುವುದು
ಕುಕನೂರಿನ ಜಿಂದುಸಾಬ್ ಅವರು ಡಾಬಾದಲ್ಲಿ ಲಕ್ಷ್ಮಿಪೂಜೆ ಮಾಡುತ್ತಿರುವುದು   

ಕುಕನೂರು: ಇಲ್ಲಿನ ಹೊರವಲಯದಲ್ಲಿರುವ ಜಿಂದುಸಾಬ ಮೆಳ್ಳಿಕೇರಿ ಎಂಬ ಮುಸ್ಲಿಂ ಕುಟುಂಬವು ತಮ್ಮ ಡಾಬಾದಲ್ಲಿ ಸೋಮವಾರ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಹಿಂದೂ ಹಾಗೂ ಮುಸ್ಲಿಂ ಭಾವೈಕ್ಯತೆಯನ್ನು ಮೆರೆದಿದ್ದಾರೆ.

ಜಿಂದುಸಾಬ್ ಮಾತನಾಡಿ, ದೀಪಾವಳಿಯ ಹಿನ್ನೆಲೆಯಲ್ಲಿ ಎರಡು ದಿನ ಮಾಂಸಾಹಾರಿ ಅಡುಗೆ ಮಾಡದೆ, ಡಾಬಾ ಶುಚಿಗೊಳಿಸಿ ಭಕ್ತಿಯಿಂದ ಸಂಪ್ರದಾಯ ಬದ್ಧವಾಗಿ ಲಕ್ಷ್ಮಿ ಪೂಜೆಯನ್ನು ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ
ಎಂದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಮುಸ್ಲಿಂ ಕುಟುಂಬಗಳು ಈ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡುತ್ತೇವೆ ಎಂದು ಸಂತಸದಿಂದ ಪತ್ರಿಕೆಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.