ADVERTISEMENT

ಕುಕನೂರು | ಹೆಸರು ಬೆಳೆಗೆ ನಂಜು ರೋಗ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:13 IST
Last Updated 20 ಜುಲೈ 2024, 16:13 IST
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಹೆಸರು ಬೆಳೆ ಪರಿಶೀಲನೆ ಮಾಡಿದ ಕೃಷಿ ಅಧಿಕಾರಿಗಳು
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಹೆಸರು ಬೆಳೆ ಪರಿಶೀಲನೆ ಮಾಡಿದ ಕೃಷಿ ಅಧಿಕಾರಿಗಳು   

ಕುಕನೂರು: ತಾಲ್ಲೂಕಿನ ತಳಕಲ್, ತಳಬಾಳ, ನಿಂಗಾಪುರ, ಇಟಗಿ ಗ್ರಾಮಗಳಲ್ಲಿ ಹೆಸರು ಬೆಳೆಯ ಕುಡಿ ಸಾಯುವ ನಂಜು ರೋಗದ ಕುರಿತು ಜಿಲ್ಲಾಮಟ್ಟದ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಜಿಲ್ಲಾ ವಿಸ್ತರಣಾಧಿಕಾರಿ ಸಹದೇವ್ ಯರಗೊಪ್ಪ ಮಾತನಾಡಿ, ‘ಗಿಡ ಗಿಡ್ಡವಾಗುವುದು, ಕುಡಿ ಎಲೆಯಲ್ಲಿ ತಿಳಿಹಳದಿ ಬಣ್ಣದ ವೃತ್ತಾಕಾರದ ಮಚ್ಚೆಗಳು ಕಂಡು ಬರುವವು. ಗಿಡದಲ್ಲಿ ಹೂ ಇಲ್ಲದಿರುವುದು, ಕುಡಿ ಸಾಯುವುದು ಹಾಗೂ ಹೊಸ ಚಿಗುರು ಬರುವುದು ಕಂಡು ಬರುತ್ತವೆ. ಗಿಡದಲ್ಲಿ ಕಾಯಿಗಳು ಕಡಿಮೆ, ಬೆಳೆಯ ಮೊಗ್ಗು ಬಾಡಿ ಕೊಳೆತು ಹೋಗುತ್ತದೆ’ ಎಂದರು.

ರೋಗವನ್ನು ತಡೆಗಟ್ಟಬೇಕಾದರೆ ಬೇಸಿಗೆ ಬಿತ್ತನೆಯನ್ನು ಬೇಗನೆ ಮಾಡಬೇಕು. ಹೊಲದಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಔಷಧಿ ಸಿಂಪರಣೆ ಮಾಡಬೇಕು. ತೀವ್ರ ಬಾಧೆ ಕಂಡುಬಂದಲ್ಲಿ 0.3 ಮಿ.ಲೀ ಇಮಿಡಾಕ್ಲೋಪ್ರೀಡ್, 17.8 ಎಸ್ಎಲ್‌ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದರು.

ADVERTISEMENT

ತಿಮ್ಮಣ್ಣ ಚೌಡಿ, ಪ್ರಾಣೇಶ್‌ ಹಾದಿಮನಿ, ಡಾ. ರಾಘವೇಂದ್ರ ಎಲಿಗಾರ್‌, ಡಾ. ಎಸ್‌.ಬಿ.ಗೌಡರ್‌, ಡಾ. ವಾಮನಮೂರ್ತಿ, ಡಾ. ರೇವತಿ. ಆರ್‌, ಸಿದ್ರಾಮರಡ್ಡಿ, ಗೂಳಪ್ಪ ಕೊಳಜಿ, ಮಲ್ಲಿಕಾರ್ಜುನ ಗಡಗಿ, ಶಂಕರ್‌ ಕುಲಕರ್ಣಿ, ಗಂಗಮ್ಮ ಗಡಗಿ, ಶಿವುಕುಮಾರ ಆದಾಪುರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.