ADVERTISEMENT

ಸಂಭ್ರಮದಿಂದ ನಡೆದ ದ್ಯಾಮವ್ವ ದೇವಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 15:57 IST
Last Updated 14 ಫೆಬ್ರುವರಿ 2024, 15:57 IST
ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವ ದೇವಿಯ ಮೂರ್ತಿಯ ಮೆರವಣಿಗೆ ನಡೆಯಿತು
ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವ ದೇವಿಯ ಮೂರ್ತಿಯ ಮೆರವಣಿಗೆ ನಡೆಯಿತು   

ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ 2ನೇ ದಿನವಾದ ಬುಧವಾರ ಗಂಗಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗ್ರಾಮದಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು. ಸಣ್ಣ ಮಾರುತೇಶ್ವರ ಮೂರ್ತಿ, ಅನ್ನಪೂಣೇಶ್ವರಿ ಮೂರ್ತಿಯ ಮೆರವಣಿಗೆ ಸಂಭ್ರಮ, ಸಡಗರದಿಂದ ಸಾಗಿತು. ಬೆಳಿಗ್ಗೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಮಡಿಯಲ್ಲಿಯೇ ಗ್ರಾಮ ಸೀಮಾ ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನಕ್ಕೆ ಮೆರವಣಿಗೆಯೊಂದಿಗೆ ತೆರಳಿ ದೇವಿಯು ಅಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ವಸ್ತ್ರಾಭರಣದಿಂದ ಅಲಂಕೃತಗೊಂಡು ಸಾಗಿತು.

ಮೆರವಣಿಗೆಯುದ್ದಕ್ಕೂ ಮುತ್ತೈದೆಯರ ಆರತಿ, ಕುಂಭವು ಸಂಭ್ರಮದಿಂದ ಸಾಗಿತು. ನಾರಿಯರ ಡೊಳ್ಳು, ಕುಣಿತ, ನಂದಿ ಕೋಲಿನ ಹೆಜ್ಜೆ ಕುಣಿತ ಗಮನ ಸೆಳೆಯಿತು. ದ್ಯಾಮವ್ವ ದೇವಿ ಮೂರ್ತಿಯೊಂದಿಗೆ ದುರ್ಗಾದೇವಿ ಮೂರ್ತಿ, ಪಲ್ಕಕ್ಕಿ ಸೇರಿದಂತೆ ಅನ್ನಪೂಣೇಶ್ವರಿ, ಸಣ್ಣ ಮಾರುತೇಶ್ವರ ಮೂರ್ತಿಯ ಮೆರವಣಿಗೆಯು ಅಲಂಕಾರಿತ ಮಂಟಪದಲ್ಲಿ ಮೆರವಣಿಗೆ ಸಾಗಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.