ADVERTISEMENT

‘ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ಅಗತ್ಯ’

ಟೆಂಗುಂಟಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:52 IST
Last Updated 13 ಜೂನ್ 2024, 6:52 IST
ಕುಷ್ಟಗಿ ತಾಲ್ಲೂಕಿನ ಟೆಂಗುಂಟಿ ಶಾಲೆಯಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು
ಕುಷ್ಟಗಿ ತಾಲ್ಲೂಕಿನ ಟೆಂಗುಂಟಿ ಶಾಲೆಯಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು   

ಕುಷ್ಟಗಿ: ‘ಸರ್ಕಾರದ ಅನುದಾನ ಒದಗಿಸುವ ಮೂಲಕ ಶಾಲೆಗಳು ಮತ್ತು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ, ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಟೆಂಗುಂಟಿ ಗ್ರಾಮದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಅವರು ಮಾತನಾಡಿ, ಗ್ರಾಮದ ಕೆಲಸಗಳು ಮತ್ತು ಪ್ರೌಢಶಾಲೆ ಮಂಜೂರಾತಿ ಬಗ್ಗೆ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.

‘ಶೈಕ್ಷಣಿಕ ಬೆಳವಣಿಗೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಅದಕ್ಕೆ ಪೂರಕವಾಗಿ ಸಮುದಾಯದ ಸಹಕಾರ ಅಗತ್ಯವಾಗಿರುತ್ತದೆ. ಶಿಕ್ಷಣದ ವಿಷಯ ಬಂದಾಗ ಗ್ರಾಮದ ಜನರು ಒಂದೇ ಅಭಿಪ್ರಾಯ ಹೊಂದಿರಬೇಕು’ ಎಂದು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಗ್ಯಾನಪ್ಪಯ್ಯ ತಾತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ. ಶರಣಪ್ಪ, ಮುಖ್ಯಶಿಕ್ಷಕ ಶಿವಾನಂದ ಧರೆಗೊಂಡ, ಸಮೂಹ ಸಂಪನ್ಮೂಲ ವ್ಯಕ್ತಿ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಬಾಳಮ್ಮ, ಶರಣಪ್ಪ ಕೌದಿ, ಬಾಳಮ್ಮ ಆಡಿನ, ಗಂಗಮ್ಮ ಜೇನರ, ಪೃಥ್ವಿ, ಹನುಮವ್ವ, ಹನುಮಪ್ಪ ಮಾದರ, ಭಾಗಪ್ಪ ತಳವಾರ, ಗೌಡಪ್ಪಗೌಡ, ಹನುಮಂತಪ್ಪ ಅಂಗಡಿ, ಮಲ್ಲಪ್ಪ ಮೇಟಿ, ಬಾಳನಗೌಡ ಮೇಟಿ, ಶರಣಪ್ಪ ಹೊಸೂರು, ಶಿಕ್ಷಕರು ಹಾಜರಿದ್ದರು.

ಮಂಜುನಾಥ ಲಕ್ಷ್ಮೇಶ್ವರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.