ಕುಷ್ಟಗಿ: ಪ್ರತಿಯೊಬ್ಬ ವಿದ್ಯಾರ್ಥಿ ಹಲವು ವಿಷಯಗಳಲ್ಲಿ ಪ್ರತಿಭೆ ಹೊಂದಿರುತ್ತಾನೆ. ಅವರ ಪೈಕಿ ಮಾದರಿ ಆಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕೆಲಸ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಹೋಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಾಲ್ಲೂಕಿನ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವಿವಿಧ ಹುದ್ದೆಗಳಿಗೆ ನೇಮಕವಾದವರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಿಂದ 19 ಜನ ಎಂಬಿಬಿಎಸ್, ಐವರು ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಆಯ್ಕೆ ಆಗಿದ್ದಾರೆ. ಕೆಲವರು ಐಎಎಸ್, ಪೊಲೀಸ್ ಇಲಾಖೆಗಳಿಗೆ ಸೇರ್ಪಡೆ ಆಗಿದ್ದು ಉತ್ತಮ ಬೆಳವಣಿಗೆ. ಇದರಿಂದ ಇತರರು ಪ್ರೇರಣೆ ಪಡೆದು ಅವರೂ ಉನ್ನತ್ತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.
ಕೇವಲ ಹಣ ಇದ್ದವರಿಗೆ ಮಾತ್ರ ಉನ್ನತ ಶಿಕ್ಷಣ, ಸರ್ಕಾರಿ ಉದ್ಯೋಗ ಎಂಬ ಮಾತ್ತಿತ್ತು. 371ಜೆ ಕಲಾಂ ಅನುಷ್ಠಾನವು ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನರಿಗೆ ಅನುಕೂಲವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ರಕ್ಷಣಾ ಇಲಾಖೆ ಅಧಿಕಾರಿ ಡಾ.ಜಯರಾಜ ನಾಯ್ಕ, ವೈದ್ಯ ಡಾ.ಕೆ.ಬಸವರಾಜ್, ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಆರ್. ನಿಂಗಪ್ಪ, ಟ್ರಸ್ಟ್ ಮುಖಂಡ ಬಸವರಾಜ ಪಾಟೀಲಮಾತನಾಡಿದರು.
ಶಿಕ್ಷಕ ಜೀವನಸಾಬ್ ವಾಲೀಕಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.