ADVERTISEMENT

'ಪರಿಸರ ಜಾಗೃತಿ ಮೂಡಿಸುವುದು ಬಹುಮುಖ್ಯ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 15:12 IST
Last Updated 8 ಜೂನ್ 2024, 15:12 IST
ಕೊಪ್ಪಳದ ಸಖಿ ಸ್ಟಾಪ್‌ ಒನ್‌ ಕೇಂದ್ರದ ಎದುರು ಬುಧವಾರ ಪರಿಸರ ದಿನ ಆಚರಿಸಲಾಯಿತು
ಕೊಪ್ಪಳದ ಸಖಿ ಸ್ಟಾಪ್‌ ಒನ್‌ ಕೇಂದ್ರದ ಎದುರು ಬುಧವಾರ ಪರಿಸರ ದಿನ ಆಚರಿಸಲಾಯಿತು   

ಕೊಪ್ಪಳ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್‌ ಸ್ಟಾಪ್‌ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಮತೆಯ ತೊಟ್ಟಿಲಿನ ಯೋಜನೆ ಮತ್ತು ವಿಶ್ವ ಪರಿಸರ ದಿನ ಆಚರಿಸಲಾಯಿತು. 

ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾ ಆಸತ್ರೆಯಲ್ಲಿನ ಸಖಿ ಘಟಕದ ಮುಂದೆ ಗಿಡ ನೆಡುವುದರ ಮೂಲಕ ಚಾಲನೆ "ಕೊಟ್ಟು ಮಾತಾಡಿದರು.

ಅತಿಥಿಯಾಗಿ ಬಂದಿದ್ದ ಅನ್ನಪೂರ್ಣ ಮಾತನಾಡಿ ‘ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪರಿಸರ ದಿನ ಆಚರಿಸಲಾಗುತ್ತದೆ’ ಎಂದರು.

ADVERTISEMENT

ಇನ್ನರ್‌ ವೀಲ್‌ ಕ್ಲಬ್‌ನ ಶಾರದಾ ಪಾನಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆಯು ನಿರ್ಗತಿಕ ತಂದೆ ತಾಯಿ ಪ್ರೀತಿ ವಂಚಿತ ಮಕ್ಕಳ ಬದುಕಿಗೆ ಸಹಾಯವಾಗುತ್ತದೆ. ತೊಟ್ಟಿಲನ್ನು ನೋಡಿ ತಮ್ಮ ಮಗುವನ್ನು ಕುರಿತು ವಿಚಾರಣೆ ಮಾಡುವಂತ ಕಾರ್ಯ ಕೂಡ ಸಖಿ ಘಟಕದಲ್ಲಿ ನಡೆಯುತ್ತಿದೆ’ ಎಂದರು.

ಕ್ಲಬ್‌ನ ಇನ್ನೊಬ್ಬ ಪ್ರಮುಖರಾದ ಸುವರ್ಣ ಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆ ಮಕ್ಕಳಿಲ್ಲದ ತಂದೆ ತಾಯಿಗಳಿಗೆ ಇಲಾಖೆಯ ಮೂಲಕ ಇಲ್ಲಿ ರಕ್ಷಿಸಲಾದ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ’ ಎಂದರು.

ಸಖಿ ಘಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರು, ಸಂಯೋಜಕಿ ಫಾತಿಮಾ, ಸುಜಾತ, ಇನ್ನರ್ ವೀಲ್ ಕ್ಲಬ್‌ನ ಶಾಂತಾ ಗೌರಿಮಠ್, ನಿರ್ಮಲಾ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕೊಪ್ಪಳ ತಾಲ್ಲೂಕಿನ ಗಿಣಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.