ADVERTISEMENT

ಚಿತ್ರರಂಗದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ: ಪರಣ್ಣ ಮುನವಳ್ಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 14:19 IST
Last Updated 5 ಮಾರ್ಚ್ 2024, 14:19 IST
ಗಂಗಾವತಿ ನಗರದ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದ ಲ್ಲಿ ಬೇವಿನಾಳ ಸಂಜಯ್ ನಿರ್ದೇಶನದ ಲಕ್ಕಿ ಲವ್ ಸ್ಟೋರಿ ಚಲನಚಿತ್ರದ ಚಿತ್ರೀಕರಣಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಚಾಲನೆ ನೀಡಿದರು.
ಗಂಗಾವತಿ ನಗರದ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದ ಲ್ಲಿ ಬೇವಿನಾಳ ಸಂಜಯ್ ನಿರ್ದೇಶನದ ಲಕ್ಕಿ ಲವ್ ಸ್ಟೋರಿ ಚಲನಚಿತ್ರದ ಚಿತ್ರೀಕರಣಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಚಾಲನೆ ನೀಡಿದರು.   

ಗಂಗಾವತಿ: ಉತ್ತರ ಕರ್ನಾಟಕ ಭಾಗದಲ್ಲಿ ಅದ್ವಿತೀಯ ಪ್ರತಿಭೆಗಳಿದ್ದು, ಸೂಕ್ತ ವೇದಿಕೆ, ಅವಕಾಶ, ಪ್ರೋತ್ಸಾಹ ದೊರೆ‌ಯಯುತ್ತಿಲ್ಲ. ಈ ಭಾಗದ ಹಿರಿಯ ಕಲಾವಿದರು ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಹಿರೇಜಂತಕಲ್‌ ಪಂಪಾವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೇವಿನಾಳ ಸಂಜಯ ಅವರ ನಿರ್ದೇಶನದ ’ಲಕ್ಕಿ ಲವ್ ಸ್ಟೋರಿ’ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಯುವ ಪ್ರತಿಭೆಗಳು ತಮ್ಮಲ್ಲಿನ ನಟನೆಯನ್ನು ಸಾಬೀತುಪಡಿಸಿಕೊಳ್ಳುದ್ದಾರೆ. ಹಿರಿಯ ಕಲಾವಿದವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಟಿಸಲು ಅವಕಾಶಗಳಿಗೆ ಕಾಯುತ್ತಿದ್ದಾರೆ. ಆದರೆ, ಕಲಾವಿದರಿಗೆ ಸರಿಯಾದ ಅವಕಾಶಗಳೇ ಸಿಗುತ್ತಿಲ್ಲ.
ರಂಗಭೂಮಿ ಕಲೆಗೆ ಉತ್ತರ ಕರ್ನಾಟಕ ಸಾಕಷ್ಟು ಕಲಾವಿದರನ್ನು ನೀಡಿದೆ ಎಂದರು.

ADVERTISEMENT

ನಿರ್ದೇಶಕ ಬೇವಿನಾಳ್ ಸಂಜಯ್, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ರಾಘವೇಂದ್ರ ಶೆಟ್ಟಿ, ಚಂದ್ರಪ್ಪ ಉಪ್ಪಾರ, ನಾಗರಾಜ ಇಂಗಳಗಿ, ಬಸವರಾಜ, ಚಂದ್ರಪ್ಪ ನಾಯಕ, ಸಿದ್ದು, ಸಂಜನಾ ರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.