ADVERTISEMENT

ರೈತರ ಹಿತಕ್ಕಾಗಿ ರೈತ ಸಂಘಟನೆ: ಮಹಮದ್ ನಜೀರಸಾಬ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:42 IST
Last Updated 25 ಅಕ್ಟೋಬರ್ 2024, 14:42 IST
ಕುಕನೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು
ಕುಕನೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು   

ಕುಕನೂರು: ‘ರೈತರ ಹಿತಕ್ಕಾಗಿ ರೈತ ಸಂಘಟನೆ ಇದೆ’ ಎಂದು ರಾಜ್ಯ ರೈತ ಸಂಘ ಹಸಿರುಸೇನೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮದ್ ನಜೀರಸಾಬ್ ಮೂಲಿಮನಿ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕಿನ ನೂತನ ರೈತ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರ ಹಿತಕ್ಕಾಗಿ ರೈತ ಸಂಘಟನೆ ಇದ್ದು, ಯಾವುದೇ ಸ್ವಾರ್ಥ ಮನೋಭಾವನೆ ಬೆಳೆಸುವುದಕ್ಕೆ ಅಲ್ಲ. ರೈತರಿಗಾಗಿ ಏನೇ ಹೋರಾಟ ಮಾಡಿದರೂ ಸಿದ್ಧವಾಗುತ್ತೇನೆ’ ಎಂದರು.

ADVERTISEMENT

ರೈತ ಮುಖಂಡ ಬಸವರಾಜ ಕೊಡ್ಲಿ ಪಾಸ್ತಾವಿಕವಾಗಿ ಮಾತನಾಡಿದರು.

ಸಂಘಟನೆಯ ಮೇಘರಾಜ್ ಜಿಡಗಿ, ಶರಣಯ್ಯ ಮುಳ್ಳುರ ಮಠ, ಸುಭಾಸ್ ಹಾಳಕೇರಿ, ವೀರಪ್ಪ ಕೌದಿ, ನಿರ್ಮಲಾ ಹಳ್ಳಿ, ದೇವಮ್ಮ ಹಳ್ಳಿಗುಡಿ, ಸರೋಜಮ್ಮ ಕುಂಬಾರ, ದುರಗಮ್ಮ ಛಲದಡಿ, ಬಸಮ್ಮ ಅಂಗಡಿ, ಹನುಮಪ್ಪ ಹಳ್ಳಿಗುಡಿ, ನಿಂಗಜ್ಜ ಗುರಿಕಾರ, ಈರಮ್ಮ ಮಟ್ಟಮ್ಮನವರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.