ADVERTISEMENT

ಜಮಾಪುರ: ಶೌಚಾಲಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 5:12 IST
Last Updated 19 ಅಕ್ಟೋಬರ್ 2024, 5:12 IST
   

ಕಾರಟಗಿ: ತಾಲ್ಲೂಕಿನ ಉಳೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮಾಪುರ ಗ್ರಾಮದಲ್ಲಿ ಶುಕ್ರವಾರ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಜಾಗ ನಿರ್ಧರಿಸುವ ವಿಚಾರವಾಗಿ ಗಲಾಟೆ ನಡೆದಿದ್ದು ಎರಡು ಗುಂಪುಗಳ ಜನ ಹೊಡೆದಾಡಿಕೊಂಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಗ್ರಾಮಕ್ಕೆ ಹೈಟೆಕ್‌ ಶೌಚಾಲಯ ಮಂಜೂರಾಗಿತ್ತು. ಈ ಕುರಿತು ಚರ್ಚಿಸಲು ಗ್ರಾಮ ಸಭೆ ಮುಗಿದ ಬಳಿಕ ಹೊಡೆದಾಟ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಶೌಚಾಲಯ ನಿರ್ಮಾಣಕ್ಕೆ ಎಸ್‌.ಸಿ. ಕಾಲೊನಿಯಲ್ಲಿ ಸರ್ಕಾರ ಜಾಗವಿದ್ದು ಅಲ್ಲಿಯೇ ನಿರ್ಮಿಸಬೇಕು ಎಂದು ಗ್ರಾಮಸ್ಥರು ಹೇಳಿದರೆ, ನಿರ್ವಹಣೆ ಸಮಸ್ಯೆಯಾದರೆ ಗಬ್ಬು ವಾಸನೆ ಬರುತ್ತದೆ. ಆದ್ದರಿಂದ ನಮ್ಮ ಕಾಲೊನಿಯಲ್ಲಿ ಶೌಚಾಲಯ ನಿರ್ಮಿಸಬೇಡಿ ಎಂದು ಪರಿಶಿಷ್ಟ ಜಾತಿಯ ಜನ ಹೇಳಿದ್ದಾರೆ. ಇದರಿಂದ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.