ಕೊಪ್ಪಳ: ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ನ ನಾನ್ಸೆಲಿಯೆರ್ ದಿದಿಯೆ (63) ಎಂಬ ವ್ಯಕ್ತಿ ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್ ಮಗುಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಐದು ಸದಸ್ಯರನ್ನು ಒಳಗೊಂಡ ಫ್ರಾನ್ಸ್‌ನ ಸ್ನೇಹಿತರ ತಂಡ ಅ. 24ರಂದು ಚೆನ್ನೈ ಮೂಲಕ ಭಾರತಕ್ಕೆ ಬಂದಿತ್ತು. ದೇಶದ ಪ್ರವಾಸಿ ತಾಣಗಳನ್ನು ಸುತ್ತಲು ಚೆನ್ನೈನಲ್ಲಿ ಬೈಕ್‌ಗಳನ್ನು ಬಾಡಿಗೆ ಪಡೆದುಕೊಂಡು ಹಂಪಿಗೆ ಬಂದಿದ್ದರು. ಇಲ್ಲಿಂದ ಗೋವಾಕ್ಕೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಿಕೊಂಡು ಗೋವಾಕ್ಕೆ ಹೋಗುತ್ತಿದ್ದಾಗ ಮಿತ್ರ ನಾನ್ಸೆಲಿಯೆರ್ ದಿದಿಯೆ ಮೃತಪಟ್ಟಿದ್ದಾನೆ. ಗೋವಾದಿಂದ ಮೈಸೂರಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು’ ಎಂದು ತಂಡದ ಸದಸ್ಯ ದಿದಿಯೆ ಮೈಕಲ್ ಮಾನ್ಸೆಲಿಯೆರ್ ತಿಳಿಸಿದರು. ಮೃತದೇಹವನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.