ADVERTISEMENT

ಕೊಪ್ಪಳದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಡಿಜೆ ಅಬ್ಬರ, ಜನರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 18:22 IST
Last Updated 17 ಸೆಪ್ಟೆಂಬರ್ 2024, 18:22 IST
<div class="paragraphs"><p>ಕೊಪ್ಪಳ ಗಣೇಶೋತ್ಸವದಲ್ಲಿ ಸೇರಿದ ಜನಸ್ತೋಮ</p></div>

ಕೊಪ್ಪಳ ಗಣೇಶೋತ್ಸವದಲ್ಲಿ ಸೇರಿದ ಜನಸ್ತೋಮ

   

– ಪ್ರಜಾವಾಣಿ ಚಿತ್ರ

ಕೊಪ್ಪಳ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ 11ನೇ ದಿನದ ವಿಸರ್ಜನಾ ಮೆರವಣಿಗೆ ಮಂಗಳವಾರ ರಾತ್ರಿ ಅದ್ದೂರಿಯಾಗಿ ಆರಂಭವಾಗಿದ್ದು, ಡಿಜೆ ಸದ್ದಿನ ಅಬ್ಬರಕ್ಕೆ ಯುವಕರು ಸಂಭ್ರಮದಿಂದ ಕುಣಿದರು.

ADVERTISEMENT

ಕೋಟೆ ರಸ್ತೆಯ ವಿನಾಯಕ ಮಿತ್ರ ಮಂಡಳಿ, ಏಕದಂತ ಗಜಾನನ ಮಿತ್ರ‌ಮಂಡಳಿ, ಗಡಿಯಾರ ಕಂಬದ ಬಳಿ ಇರುವ ಗಜಾನನ ‌ಮಿತ್ರ ಮಂಡಳಿ, ಕೊಪ್ಪಳ ಕಾ ಸರ್ಕಾರ, ಕೊಪ್ಪಳ ಕಾ ಮಹಾರಾಜ ಹೀಗೆ ಅನೇಕ ಸಂಘಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು.

ಗಡಿಯಾರ ಕಂಬದ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಕಣ್ಣು ಕೊರೈಸುವ ಬಣ್ಣಬಣ್ಣದ ವಿದ್ಯುತ್‌ ಬೆಳಕಿನ ನಡುವೆ ಡಿ.ಜೆ. ಸದ್ದಿಗೆ ಹೆಜ್ಜೆ ಹಾಕಿದರು. ಸ್ನೇಹಿತರು, ಗಣಪತಿ ಪ್ರತಿಷ್ಠಾನ ಮಂಡಳಿಯವರು ಕೈ ಕೈ ಹಿಡಿದು ಕುಣಿದರು. ಬುಧವಾರ ಬೆಳಿಗಿನ ಜಾವದ ತನಕ ಮೆರವಣಿಗೆ ನಡೆಯಲಿದ್ದು, ಬಳಿಕ ಮೂರ್ತಿಗಳ ವಿಸರ್ಜನೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.