ADVERTISEMENT

ಕನಕಗಿರಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 16:17 IST
Last Updated 16 ಅಕ್ಟೋಬರ್ 2024, 16:17 IST
ಕನಕಗಿರಿ ಸಮೀಪದ ಹಿರೇಡಂಕನಕಲ್ ಗ್ರಾಮದಲ್ಲಿ ಬುಧವಾರ ನಡೆದ ಸಿಪಿಐ (ಎಂ) ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ನಿರುಪಾದಿ ಬೆಣಕಲ್ ಮಾತನಾಡಿದರು
ಕನಕಗಿರಿ ಸಮೀಪದ ಹಿರೇಡಂಕನಕಲ್ ಗ್ರಾಮದಲ್ಲಿ ಬುಧವಾರ ನಡೆದ ಸಿಪಿಐ (ಎಂ) ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ನಿರುಪಾದಿ ಬೆಣಕಲ್ ಮಾತನಾಡಿದರು   

ಕನಕಗಿರಿ: ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹ 600 ಕೂಲಿ ನೀಡಬೇಕು ಎಂದು  ಸಿಪಿಐ(ಎಂ) ಕಾರ್ಯದರ್ಶಿ ನಿರುಪಾದಿ ಬೆಣಕಲ್ ಒತ್ತಾಯಿಸಿದರು.

ಸಮೀಪದ ಹಿರೇ ಡಂಕನಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಿಪಿಐ (ಎಂ) ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.

ರೈತಾಪಿ ವರ್ಗ ಸಂಕಷ್ಟದಲ್ಲಿದೆ. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಕನಕಗಿರಿ ತಾಲ್ಲೂಕು ಬರಪೀಡಿತ ಹಾಗೂ ಮಳೆಯಾಧಾರಿತ ಪ್ರದೇಶವಾಗಿದೆ. ಇಲ್ಲಿನ ಜನ ಉದ್ಯೋಗ ಇಲ್ಲದೇ ಗುಳೆ ಹೋಗುತ್ತಾರೆ. ಬಡ ಜನರ ಜೀವನ ಮಟ್ಟ ಹೆಚ್ಚಳಕ್ಕೆ ಇಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್ ವರಲಕ್ಷ್ಮಿ ಮಾತನಾಡಿ, ಸಮಾನ‌ ಕೆಲಸಕ್ಕೆ ಸಮಾನ ವೇತನ ನೀಡಿ‌ ದೇಶದ ಬಡವರು, ಕಾರ್ಮಿಕರು, ಕೂಲಿಕಾರರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹ 600 ನೀಡಬೇಕು ಎಂದು ಒತ್ತಾಯಿಸಿದರು.

‌ರಾಜಕಾರಣಿಗಳ ಬಾಯಿಯಲ್ಲಿ ಬರೀ ಸಮಾನಾಂತರ ಜಲಾಶಯದ ಬಗ್ಗೆ ಚರ್ಚೆ ಆಗುತ್ತವೆ ಅದನ್ನು ನಿರ್ಮಾಣ ಮಾಡುವ ಕಡೆಗೆ ಯೋಚಿಸಬೇಕು ಎಂದು ಹೇಳಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ. ನಾಗರಾಜ ಮಾತನಾಡಿ, ತಾಲ್ಲೂಕು ರಚನೆಯಾಗಿ ಏಳು ವರ್ಷ ಗತಿಸಿದರೂ ತಾಲ್ಲೂಕು ಆಡಳಿತದ ಕಚೇರಿಗಳು ಆರಂಭ ಆಗಿಲ್ಲ.  ಆದಷ್ಟು ಬೇಗ ಆರಂಭಿಸಬೇಕು ಎಂದು ತಿಳಿಸಿದರು.

ಸಿಪಿಐ( ಎಂ) ಜಿಲ್ಲಾ ಸಮಿತಿ ಸದಸ್ಯ ಅಮರೇಶ ಕಡಗದ ಮಾತನಾಡಿದರು. ಪ್ರಮುಖರಾದ ಹುಸೇನಪ್ಪ,
ಬಸವರಾಜ, ಲಕ್ಷ್ಮೀದೇವಿ ಸೋನಾರ, ನೂರಜಹಾನ್ ಬೇಗಂ ಹಾಜರಿದ್ದರು.

ಇದೇ ಸಮಯದಲ್ಲಿ ಸಿಪಿಐ(ಎಂ)ನ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹುಲಿಹೈದರ (ಕಾರ್ಯದರ್ಶಿ), ಸದಸ್ಯರಾಗಿ ಮಲ್ಲಪ್ಪ ಮ್ಯಾಗಡೆ, ರಮೇಶ ಬಡಿಗೇರ,
ಪಂಪಾಪತಿ ಅಲಾಯಿ ಕುಣಿ, ಲಕ್ಷ್ಮಿ ಪರಸಪ್ಪ, ನಬಿಸಾಬ ಚಳ್ಳಮರದ, ಮೌಲಾಹುಸೇನ ಸುಳೇಕಲ್, ಹಾಗೂ ಶಿವಕುಮಾರ ಈಚನಾಳ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.