ಕೊಪ್ಪಳ:ಭಾರತ ಸೇರಿದಂತೆ ಹೊರದೇಶಗಳಾದ ಬಹರೈನ್, ಯುಎಇ, ಸೌದಿ ಅರೇಬಿಯಾ, ಕುವೈತ್ ದೇಶಗಳ ಫೋಟೊಗ್ರಾಫಿಕ್ ಸೊಸೈಟಿರವರು ಆಯೋಜಿಸಿದ್ದ ಪ್ರತಿಷ್ಠಿತ ‘ಗಲ್ಫ್ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ’ಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.
ಈ ಸ್ಪರ್ಧೆಯಲ್ಲಿ ಒಟ್ಟು 4 ವಿಭಾಗಗಳಿದ್ದು, ಅದರಲ್ಲಿ ಟ್ರಾವೆಲ್ ವಿಭಾಗದ ‘ರಿ ಫೇಸ್ಟಿವಲ್’ ಶೀರ್ಷಿಕೆಯ ಚಿತ್ರಕ್ಕೆ ಚಿನ್ನದ ಪದಕ ಸಿಕ್ಕಿದೆ. ಈ ಚಿತ್ರ ಫಂಡರಪುರದ ವಾರಕರಿ ಸಂಪ್ರದಾಯದ ಸಾಹಸ, ಭಜನೆ ಹಾಗೂ ನೃತ್ಯ ಮೇಳವನ್ನು ಕಟ್ಟಿಕೊಟ್ಟಿದೆ.
ಸ್ಪರ್ಧೆಯಲ್ಲಿ 48 ದೇಶಗಳಿಂದ 450 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತರರಾಷ್ಟ್ರಿಯ ಖ್ಯಾತಿಯ ಛಾಯಾಚಿತ್ರಗಾರರಾದ ಓಲಾ ಅಲ್ಹೌಜ್, ಶಫೀಕ್ ಅಲ್ ಶರ್ಕಿ, ಅಮ್ಮರ್ ಅಲಾಮಿರ್, ನಜಾತ್ ಅಲ್ ಫರ್ಸಾನಿ ತೀರ್ಪುಗಾರರಾಗಿದ್ದರು.
ಹವ್ಯಾಸಿ ಛಾಯಾಗ್ರಾಹಕರಾದ ಶ್ರೀನಿವಾಸ ಎಣ್ಣಿ ಪ್ರಸ್ತುತ ಗಂಗಾವತಿಯ ಕೆಪಿಟಿಸಿಎಲ್‌ನಲ್ಲಿ ಕಿರಿಯ ಎಂಜಿನಿಯರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 6 ವರ್ಷಗಳಿಂದ ಇವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರಿಯ ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.