ತಾವರಗೇರಾ: ‘ಲಾಕ್‌ಡೌನ್ ಸಮಯದಲ್ಲೂ ಸುದ್ದಿ ಸಂಗ್ರಹಿಸಿ ಮಾಹಿತಿ ನೀಡುವ ಮಾಧ್ಯಮದವರ ಕಾರ್ಯ ಶ್ಲಾಘನೀಯ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಚಂದ್ರಶೇಖರ ನಾಲತವಾಡ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ನೀಡಿದ ಆಹಾರ ಧಾನ್ಯದ ಕಿಟ್‌ಗಳನ್ನು ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ವಿತರಿಸಿ ಮಾತನಾಡಿದರು.
ಕೋವಿಡ್ ಮಧ್ಯೆಯೂ ಜನರಿಗೆ ಸುದ್ದಿ ಮುಟ್ಟಿಸುವ ವರದಿಗಾರರು ಹಾಗೂ ಪತ್ರಿಕೆ ವಿತರಿಸುವ ವಿತರಕರ ಕೆಲಸ ಮೆಚ್ಚಬೇಕಿದೆ. ಪತ್ರಿಕಾ ವಿತರಕರಿಗೆ ತಮ್ಮದೇ ಆದ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ. ಆರ್ಥಿಕವಾಗಿ ಹಿಂದುಳಿದವರಿರುತ್ತಾರೆ. ಅಂಥವರಿಗೆ ಸರ್ಕಾರ ಆರ್ಥಿಕ ನೆರವು ಒದಗಿಸಬೇಕು ಎಂದರು.
ಬಿಜೆಪಿ ಮುಖಂಡರಾದ ಸಾಗರ ಭೇರಿ, ಪ.ಪಂ. ಸದಸ್ಯರಾದ ಚನ್ನಪ್ಪ ಸಜ್ಜನ್, ರಾಘವೇಂದ್ರ ನಾಯಕ, ಬಿಜೆಪಿ ಮಂಡಲ ಕುಷ್ಟಗಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೂಲಕುಂಟಿ, ಶಾಮೂರ್ತಿ ಅಂಚಿ, ಮಂಜುನಾಥ ದೇಸಾಯಿ, ವೀರಭದ್ರಪ್ಪ ಬುಡಕುಂಟಿ ಸೇರಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಪತ್ರಿಕಾ ವಿತರಕರಾದ ಲಾಳೆಸಾಬ, ಶ್ಯಾಮಣ್ಣ, ವಿರೇಶ ಕುಂಬಾರ, ಎಂ.ಡಿ.ರಫೀಕ್, ಹನುಮೇಶ ಮಡಿವಾಳರ, ಶ್ಯಾಮ್ ಚಗೂರು ಹಾಗೂ ಪತ್ರಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.