ADVERTISEMENT

ಕೊಪ್ಪಳ: ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 16:06 IST
Last Updated 20 ಡಿಸೆಂಬರ್ 2023, 16:06 IST
ಕೊಪ್ಪಳದಲ್ಲಿ ಬುಧವಾರ ಅತಿಥಿ ಉಪನ್ಯಾಸಕರು ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದರು
ಕೊಪ್ಪಳದಲ್ಲಿ ಬುಧವಾರ ಅತಿಥಿ ಉಪನ್ಯಾಸಕರು ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದರು   

ಕೊಪ್ಪಳ: ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ 28ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನೆ ಆರಂಭಗೊಂಡು ಇಷ್ಟು ದಿನಗಳಾದರೂ ಸರ್ಕಾರದಿಂದ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಕೊಪ್ಪಳದ ಅತಿಥಿ ಉಪನ್ಯಾಸಕರು ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ‌ನಡೆಸಿದರು.

ಈಗಾಗಲೇ ಪಾದಯಾತ್ರೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪತ್ರ ಚಳವಳಿ ನಡೆಸಲಾಗಿದೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾಗಿದೆ. ಇಷ್ಟಾದರೂ ಸರ್ಕಾರದ ಮೌನ ಅತಿಥಿ ಉಪನ್ಯಾಸಕರ ಹೋರಾಟವನ್ನು ತೀವ್ರಗೊಳ್ಳುವಂತೆ ಮಾಡಿದ್ದು, ಇದೀಗ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ತಮ್ಮ ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಉಪನ್ಯಾಸಕರು ಹೇಳಿದರು.

ADVERTISEMENT

ಹಲವು ವರ್ಷಗಳಿಂದ ನಾವು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಇದುವರೆಗೂ ನಮಗೆ ಯಾವುದೇ ಭದ್ರತೆ ಇಲ್ಲ. ವರ್ಷದಲ್ಲಿ ಹತ್ತು ತಿಂಗಳು ಮಾತ್ರ ಸಂಬಳ ನೀಡುತ್ತಿರುವ ಸರ್ಕಾರ, ಅದನ್ನೂ ಸರಿಯಾಗಿ ನೀಡುತ್ತಿಲ್ಲ. ವಯೋಮಿತಿ ಮೀರುತ್ತಿದೆ. ಸರ್ಕಾರ ಕೂಡಲೇ ನಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಅತಿಥಿ ಉಪನ್ಯಾಸಕಿ ಲತಾ ಆಗ್ರಹಿಸಿದರು.

ಹೋರಾಟದಲ್ಲಿ ವಿಜಯಕುಮಾರ್‌ ಕುಲಕರ್ಣಿ, ವೀರಣ್ಣ ಸಜ್ಜನರ್‌, ಬಸವರಾಜ ಕರುಗಲ್‌ ರಕ್ತದಲ್ಲಿ ಪತ್ರ ಬರೆದರು. ಸಣ್ಣದೇವೇಂದ್ರಸ್ವಾಮಿ, ಪ್ರಕಾಶ ಬಳ್ಳಾರಿ, ತುಕಾರಾಂ ನಾಯಕ, ಶಿವಮೂರ್ತಿಸ್ವಾಮಿ, ಕಲ್ಲಯ್ಯ, ಗೀತಾ ಬನ್ನಿಕೊಪ್ಪ, ಅಕ್ಕಮಹಾದೇವಿ, ಸಾವಿತ್ರಿ, ಗಿರಿಜಾ ತುರಮುರಿ, ಎಂ.ಶಿವಣ್ಣ, ಮಹಾಂತೇಶ ನೆಲಾಗಣಿ, ಶಿವಬಸಪ್ಪ‌ ಮಸ್ಕಿ, ರಾಮಪ್ರಸಾದ, ಸಿ.ಬಸವರಾಜ, ವಿಜಯಕುಮಾರ ತೋಟದ, ಬಸವರಾಜ ಹುಳಕಣ್ಣವರ್‌, ಪ್ರಕಾಶ ಜಡಿಯವರ್‌, ಈಶಪ್ಪ ಮೇಟಿ ಸೇರಿದಂತೆ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.