ADVERTISEMENT

ಮುನಿರಾಬಾದ್ | ಹುಲಿಗಿ: ₹81.39 ಲಕ್ಷ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:19 IST
Last Updated 20 ಮಾರ್ಚ್ 2024, 16:19 IST
ಹುಲಿಗಿಯ ಹುಲಿಗೆಮ್ಮ ದೇವಿಯ ವಿಗ್ರಹ
ಹುಲಿಗಿಯ ಹುಲಿಗೆಮ್ಮ ದೇವಿಯ ವಿಗ್ರಹ   

ಮುನಿರಾಬಾದ್: ಹುಲಿಗಿಯ ಧಾರ್ಮಿಕ ದತ್ತಿ ಇಲಾಖೆಯ ಹುಲಿಗೆಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ ₹81.39 ಲಕ್ಷ ನಗದು, 250 ಗ್ರಾಂ. ಕಚ್ಚಾ ಚಿನ್ನ ಮತ್ತು 10 ಕೆ.ಜಿ ಕಚ್ಚಾ ಬೆಳ್ಳಿ ಸಂಗ್ರಹವಾಗಿದೆ.

ಬುಧವಾರ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಗಿದ್ದು, 35 ದಿನಗಳ ಸಂಗ್ರಹ ಇದಾಗಿದೆ. ಇದು ಕಳೆದ ಬಾರಿಗಿಂತ ಹೆಚ್ಚಾಗಿದೆ.

ಕಚ್ಚಾ ಚಿನ್ನ ಹುಂಡಿಗೆ ಹಾಕುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಕಳೆದ ಬಾರಿ 90 ಗ್ರಾಂ ಕಚ್ಚಾ ಚಿನ್ನ, 5.50 ಕೆ.ಜಿ ಕಚ್ಚಾ ಬೆಳ್ಳಿ ಸಂಗ್ರಹವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.