ADVERTISEMENT

ಯಲಬುರ್ಗಾದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು: ಬಸವರಾಜ ರಾಯರಡ್ಡಿ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಮೇ 2023, 10:51 IST
Last Updated 13 ಮೇ 2023, 10:51 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ    

ಕೊಪ್ಪಳ: ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವು ಪಡೆದಿದ್ದಾರೆ. ರಾಯರಡ್ಡಿ ಒಟ್ಟು 92508 ಮತಗಳನ್ನು ಪಡೆದರೆ, ಹಾಲಿ ಶಾಸಕ ಬಿಜೆಪಿಯ ಹಾಲಪ್ಪ ಆಚಾರ್ 75461 ಮತಗಳನ್ನು ಪಡೆದರು.

ರಾಯರಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದು ಇದು ಆರನೇ ಬಾರಿ. 1985ರಲ್ಲಿ ಜಿಎನ್‌ಪಿಯಿಂದ, 1989 ಮತ್ತು 1994ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿದ್ದರು. 2004 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಜಯ ಪಡೆದಿದ್ದರು.

ರಡ್ಡಿ ಸಮುದಾಯಕ್ಕೆ ಸೇರಿದ್ದ ರಾಯರಡ್ಡಿ ಮತ್ತು ಹಾಲಪ್ಪ ಆಚಾರ್‌ ನಡುವೆ ಯಲಬುರ್ಗಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇತ್ತು. ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ ಯತ್ನಾಳ, ನಟ ಸುದೀಪ್‌, ಬಿ.. ಶ್ರಿರಾಮುಲು ಸೇರಿದಂತೆ ಅನೇಕ ನಾಯಕರನ್ನು ಕರೆಯಿಸಿ ಹಾಲಪ್ಪ ಪ್ರಚಾರ ಮಾಡಿದ್ದರು. ಚುನಾವಣೆ ಘೋಷಣೆಗೂ ಮೊದಲು ಸಿದ್ದರಾಮಯ್ಯ ಹಾಗೂ ಸಂಬಂಧಿಕರಾದ ಲಕ್ಷ್ಮಣ ಸವದಿ ಅವರು ರಾಯರಡ್ಡಿ ಪರ ಮತಯಾಚನೆ ಮಾಡಿದ್ದಾರೆ. ವಿಶೇಷವಂದರೆ ಈ ಬಾರಿ ರಾಯರಡ್ಡಿ ಮಗಳು ಮತ್ತು ಅಳಿಯ ಅಖಾಡಕ್ಕೆ ಇಳಿದಿದ್ದರು. ಒಟ್ಟು 2,23,036 ಮತದಾರರಲ್ಲಿ 1,75,637 ಜನ ಮತ ಚಲಾಯಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.