ಯಲಬುರ್ಗಾ: ‘ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ’ ಎಂದು ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಇಂದಿರಾ ಅವರ ರಾಜಕೀಯ ಧೋರಣೆಗಳು, ಅಭಿವೃದ್ಧಿಪರ ಚಿಂತನೆಗಳು ಇಂದಿಗೂ ಜಾರಿಯಲ್ಲಿವೆ. ಪ್ರಬುದ್ಧ ಪ್ರಧಾನಿಯಾಗಿದ್ದ ಇವರ ವ್ಯಕ್ತಿತ್ವ ಸ್ಮರಣಾರ್ಹ’ ಎಂದರು.
ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಗೊಲ್ಲರ ಮಾತನಾಡಿ,‘ಬಡವರ ಆಶಾಕಿರಣವಾಗಿ ದೇಶದ ಕೋಟ್ಯಂತರ ಕುಟುಂಬಗಳ ಬದುಕು ಕಟ್ಟಿಕೊಳ್ಳಲು ನೆರವು ನೀಡಿದ ಹಿರಿಮೆ ಇಂದಿರಾ ಗಾಂಧೀಗೆ ಸಲ್ಲುತ್ತದೆ’ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯೆ ನಂದಿತಾ ದಾನರೆಡ್ಡಿ ಮಾತನಾಡಿರು. ಪಟ್ಟಣ ಪಂಚಾಯಿತಿ ಮಾಜಿಜಿ ಅಧ್ಯಕ್ಷೆ ಜಯಶ್ರೀ ಅರಕೇರಿ, ಶರಣಮ್ಮ ಪೂಜಾರ, ಶಾಸಕರ ಆಪ್ತ ಸಹಾಯಕ ರಮೇಶ ಕೊಣ್ಣೂರು, ಮುಖಂಡರಾದ ಪ್ರಭುರಾಜ ಹವಲ್ದಾರ, ರಹಿಮಾನ್‌ಸಾಬ್ ನಾಯಕ, ಪುನೀತ ಕೊಪ್ಪಳ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.