ADVERTISEMENT

ಅಂಜನಾದ್ರಿ ಬೆಟ್ಟಕ್ಕೆ ನ್ಯಾಯಮೂರ್ತಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:47 IST
Last Updated 6 ಜನವರಿ 2024, 15:47 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳು ಬೆಟ್ಟದಲ್ಲಿ ಮೇಲ್ಭಾಗದಲ್ಲಿ ನಿಂತು ಪೋಟೊ ಕ್ಲಿಕ್ಕಿಸಿಕೊಂಡರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳು ಬೆಟ್ಟದಲ್ಲಿ ಮೇಲ್ಭಾಗದಲ್ಲಿ ನಿಂತು ಪೋಟೊ ಕ್ಲಿಕ್ಕಿಸಿಕೊಂಡರು   

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿಗಳಾದ  ಎಸ್.ಜಿ.ಪಂಡಿತ್, ಅಶೋಕ್ ಎಸ್., ಎನ್.ಎಸ್.ಸಂಜಯಗೌಡ, ಎಸ್.ವಿಶ್ವಜಿತ್ ಶೆಟ್ಟಿ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.

575 ಮೆಟ್ಟಿಲುಗಳ ಮೂಲಕ ಬೆಟ್ಟ ಏರಿದ ನ್ಯಾಯಮೂರ್ತಿಗಳು ಮಹಾಮಂಗಳಾರತಿ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ಸಲ್ಲಿಸಿದರು.

ನಂತರ ಬೆಟ್ಟದ ಹಿಂಬದಿಯ ಚಿಕ್ಕರಾಂಪುರ, ರಂಗಾಪುರ, ಹನುಮನಹಳ್ಳಿ, ದೂರದ ಹಳೆಯ ಹಂಪಿ, ತುಂಗಾಭದ್ರ ನದಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಂಡರು. ನಂತರ ತಾಲ್ಲೂಕು ಆಡಳಿತವು ನ್ಯಾಯಮೂರ್ತಿಗಳನ್ನು ಸನ್ಮಾನಿಸಿ ಬೀಳ್ಕೊಟ್ಟರು.

ADVERTISEMENT

ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಪ್ರಭಾರ ತಹಶೀಲ್ದಾರ್‌ ವಿಶ್ವನಾಥ ಮುರಡಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಹೇಶ ದಲಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.