ADVERTISEMENT

ಮೊದಲ ಜಿಲ್ಲಾಧ್ಯಕ್ಷರಾಗಿ ಕಳಕನಗೌಡ ಆಯ್ಕೆ

ವೀರಶೈವ ಲಿಂಗಾಯತ ಮಹಾಸಭಾ: ಜಿಲ್ಲೆ, ಮೂರು ತಾಲ್ಲೂಕು ಘಟಕಗಳಿಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:23 IST
Last Updated 10 ಜುಲೈ 2024, 5:23 IST
ಕಳಕನಗೌಡ ಎನ್‌. ಪಾಟೀಲ
ಕಳಕನಗೌಡ ಎನ್‌. ಪಾಟೀಲ   

ಕೊಪ್ಪಳ: ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮೊದಲ ಬಾರಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲೆಯ ಮೊದಲ ಅಧ್ಯಕ್ಷರಾಗಿ ಗಂಗಾವತಿಯ ಕಳಕನಗೌಡ ಎನ್‌. ಪಾಟೀಲ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಶರಣಪ್ಪ ಹ್ಯಾಟಿ, ಕಳಕನಗೌಡ ಪಾಟೀಲ್, ಶೇಖರಪ್ಪ ಮುತ್ತೇನವರ ಮತ್ತು ಶರಣಗೌಡ ಕೊಂತನೂರ ಪೊಲೀಸ್ ಪಾಟೀಲ್ ನಾಮಪತ್ರ ಸಲ್ಲಿಸಿದ್ದರು. ವಾಪಸ್‌ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದರಿಂದ ಕಳಕನಗೌಡ ಅವರನ್ನು ಹೊರತುಪಡಿಸಿ ಉಳಿದ ಮೂವರು ನಾಮಪತ್ರ ವಾಪಸ್‌ ಪಡೆದರು. ಇದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಮಹಾಸಭಾದ ಜಿಲ್ಲಾ ಚುನಾವಣೆ ಅಧಿಕಾರಿ ಸೋಮನಗೌಡ ಎಂ. ಪಾಟೀಲ ತಿಳಿಸಿದ್ದಾರೆ.

ಕಳಕನಗೌಡ ಮೂಲತಃ ಯಲಬುರ್ಗಾ ತಾಲ್ಲೂಕಿನ ಕಲ್ಲೂರಿನವರು. ಪ್ರಸ್ತುತ ಗಂಗಾವತಿಯಲ್ಲಿ ನೆಲೆಸಿದ್ದಾರೆ. 

ADVERTISEMENT

ಜಿಲ್ಲಾ ಕಾರ್ಯನಿರ್ವಾಹಕ ಸಮಿತಿಗೆ ಉಮೇಶ ಎತ್ತಿನಮನಿ, ವೀರೇಶ ಬಳಿಗಾರ, ಮಾರ್ಖಂಡಯ್ಯ ಎಸ್. ಹಿರೇಮಠ. ವೀರಪ್ಪ ಅಣ್ಣಿಗೇರಿ, ಶಿವಪುತ್ರಪ್ಪ ಕಾಡನವರ, ದೊಡ್ಡಬಸಪ್ಪ ಭತ್ತದ, ರಾಜೇಂದ್ರಕುಮಾರ ಶೆಟ್ಟರ್, ರಮೇಶ ಕವಲೂರು, ಎಚ್‌.ಎಂ. ಶಾಂತಬಸಯ್ಯ, ಬಿ. ಗಂಗಾಧರಸ್ವಾಮಿ, ಪ್ರಭಣ್ಣ ಉಪನಾಳ, ರಮೇಶ ಮಹದೇವಪ್ಪ, ಚಂದ್ರಶೇಖರ ಅಕ್ಕಿ, ಮಹಾಂತೇಶ, ಶೇಖರಗೌಡ ಉಳ್ಳಾಗಡ್ಡಿ, ಚನ್ನವೀರನಗೌಡ ಕೋರಿ, ವಿಜಿಯಾ ಮಹಾಂತೇಶ್, ಮಹಾಂತೇಶ ಗೌಡರ, ಶರಣಪ್ಪ ಹುಬ್ಬಳ್ಳಿ ಮತ್ತು ಶಶಿಧರ ಕವಲಿ ಅವಿರೋಧವಾಗಿ ಆಯ್ಕೆಯಾದರು.

ಹತ್ತು ಸ್ಥಾನಗಳ ಮಹಿಳಾ ಸದಸ್ವತ್ವಕ್ಕೆ ನಿಗದಿಯಷ್ಟೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಕ್ಕಮಹಾದೇವಿ ಕಂದಗಲ್ಲ, ಕವಿತಾ ಶಿರೋಳ, ಲಲಿತಾ ಅಗಡಿ, ಶಿಲ್ಪಾ ದಿವಟರ್, ವಿದ್ಯಾಶ್ರೀ ಮುತ್ತೇನವರ, ಸಾವಿತ್ರಿ ಯಲಬುರ್ಗಿ, ಮಹಾಂತಿ ಪಾಟೀಲ, ಶರಣಮ್ಮ ಪಾಟೀಲ,  ಶಕುಂತಲಾದೇವಿ ಮಾಲಿಪಾಟೀಲ, ಸರ್ವಮಂಗಳ ಪಾಟೀಲ ಸದಸ್ಯರಾಗಿ ನೇಮಕವಾದರು.

ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸೋಮನಗೌಡ, ಶರಣಪ್ಪ ಅರಕೇರಿ, ಎಸ್‌.ಬಿ. ಸಂತೋಷಿ ಮತ್ತು ಮಲ್ಲಿಕಾರ್ಜುನ ಕುಕನಪಳ್ಳಿ ಕಾರ್ಯನಿರ್ವಹಿಸಿದ್ದರು.

ತಾಲ್ಲೂಕು ಘಟಕ: ಮಹಾಸಭಾದ ಕೊಪ್ಪಳ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ನಾಗಭೂಷಣಸ್ವಾಮಿ ಸಾಲಿಮಠ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಶರಣಪ್ಪ ಅರಕೇರಿ ತಿಳಿಸಿದ್ದಾರೆ.

ಪುರುಷ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನ ಮಠ, ಕಳಕಪ್ಪ ಕುಂಬಾರ, ವಿರೂಪಾಕ್ಷಯ್ಯ ಹಿರೇಮಠ, ಮಲ್ಲಿಕಾರ್ಜುನ ಶಿಳ್ಳಿನ, ಹೇಮಣ್ಣ ಹಣವಾಳ, ಪಂಪಣ್ಣ ಪಲ್ಲೇದ, ಆನಂದ ತೊಡಾಲ, ರಾಯನಗೌಡ ಆಡೂರ, ಸಕ್ರಪ್ಪ ಹೊಸಭಾವಿ, ಈಶಪ್ಪ ಹಡಪದ, ಮೈಲಾರಗೌಡ ಉದ್ದಾರ, ಶಿವರಡ್ಡಿ ಭೂಮಕ್ಕನವರ, ಶರಣಪ್ಪ ವಡಕೇರಿ, ಮಹಿಳಾ ಸದಸ್ಯರಾಗಿ ಜಯಶ್ರೀ ಸುಂಕದ, ಕೀರ್ತಿ ಪೊಲೀಸ್‌ ಪಾಟೀಲ, ವಾಣಿಶ್ರೀ ಹಿರೇಮಠ ಮತ್ತು ಜ್ಯೋತಿ ಶಿಳ್ಳಿನ ಆಯ್ಕೆಯಾದರು.

ಗಿರೇಗೌಡ
ನಾಗಭೂಷಣಸ್ವಾಮಿ ಸಾಲಿಮಠ

124 ವರ್ಷಗಳ ಇತಿಹಾಸ ಹೊಂದಿರುವ ಮಹಾಸಭಾದ ಚುನಾವಣೆಯಲ್ಲಿ ಜಿಲ್ಲೆಯ ಮೊದಲ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಹೆಮ್ಮೆಯಿದೆ. ಎಲ್ಲರನ್ನೊಳಗೊಂಡು ಸಮಾಜದ ಕೆಲಸ ಮಾಡುವೆ.

–ಕಳಕನಗೌಡ ಎನ್‌. ಪಾಟೀಲ ಮಹಾಸಭಾ ಜಿಲ್ಲಾಧ್ಯಕ್ಷ

ಗಂಗಾವತಿ ಘಟಕಕ್ಕೆ ಗಿರೇಗೌಡ ಅಧ್ಯಕ್ಷ

ಗಂಗಾವತಿ: ಇಲ್ಲಿನ ಮಹಾಸಭಾ ತಾಲ್ಲೂಕು ಘಟಕದ  ಅಧ್ಯಕ್ಷರಾಗಿ ಗಿರೇಗೌಡ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಶಂಕರಗೌಡ್ರು ಹೊಸಳ್ಳಿ ದೊಡ್ಡಪ್ಪ ದೇಸಾಯಿ ರಾಚಪ್ಪ ಸಿದ್ದಾಪುರ ಹಾಗೂ ಮಹಾಲಿಂಗಪ್ಪ ಬನ್ನಿಕೊಪ್ಪ ಕೂಡ ಸ್ಪರ್ಧೆ ಮಾಡಿದ್ದರು. ಆದರೆ ಕೊನೆಯ ದಿನ ನಾಮಪತ್ರ ವಾಪಸ್‌ ಪಡೆದರು. ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಶರಣೇಗೌಡ ಮಾಲಿಪಾಟೀಲ್‌ ಮನೋಹರ್ ಸ್ವಾಮಿ ಮೂದೇನೂರ ಮನೋಹರ್ ಹೇರೂರು ಅಮರೇಶಪ್ಪ ಹುಲ್ಕಿಹಾಳ ಕರಿಬಸಪ್ಪ ಬೂದಗುಂಪ ಬಸವರಾಜ ಸ್ವಾಮಿ ಎಚ್‌.ಎಂ. ವಿಶ್ವನಾಥ್ ಮಾಲಿಪಾಟೀಲ ಕೆಸರಟ್ಟಿ ಶಾಂತಪ್ಪ ಗಣವಾರಿ ಕರಿಬಸಯ್ಯ ಗಡ್ಡಿಮಠ ಅಭಿಷೇಕ್ ಡಿ.ಎಂ. ಮಂಜುನಾಥ್ ಮರಳಿ ಸಿದ್ದಪ್ಪ ನಾಗೂರ ಮುಷ್ಟಿ ವಿರೂಪಾಕ್ಷಪ್ಪ ರೇವತಿ ಪಾಟೀಲ ಮಂಜುಳಾ ಪಾಟೀಲ ಸಂಧ್ಯಾ ಪಾರ್ವತಿ ಹೇರೂರು ಉಮಾ ಶಿವಾನಂದಸ್ವಾಮಿ ನೇಮಕವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.