ADVERTISEMENT

ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಿ: ಕಾಂತೇಶ್ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 5:13 IST
Last Updated 19 ಅಕ್ಟೋಬರ್ 2024, 5:13 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾಂತೇಶ್ ಈಶ್ವರಪ್ಪ ಮಾತನಾಡಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾಂತೇಶ್ ಈಶ್ವರಪ್ಪ ಮಾತನಾಡಿದರು   

ಕೊಪ್ಪಳ: ದಲಿತರಿಗೆ ಹಾಗೂ ಹಿಂದುಳಿದವರಿಗೆ ಸಮಾಜದಲ್ಲಿ ನ್ಯಾಯ ಕೊಡಿಸಲು ಸಂಘಟನೆಗೆ ಮುಂದಾಗಿದ್ದು, ಈ ಕುರಿತು ಚರ್ಚಿಸಲು ಬಾಗಲಕೋಟೆಯಲ್ಲಿ ಅ. 20ರಂದು ಸಮಾಲೋಚನಾ ಸಭೆ ನಡೆಯಲಿದೆ. ಇದಕ್ಕೆ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು ಎಂದು ಮುಖಂಡ ಕಾಂತೇಶ್ ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ಸಮಾಲೋಚನಾ ಸಭೆಯಲ್ಲಿ 5 ರಿಂದ 10 ಸಾವಿರ ಜನ ಸೇರಲಿದ್ದಾರೆ. 50ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. ಪಕ್ಕದಲ್ಲಿ ಇದ್ದುಕೊಂಡೇ ನನ್ನನ್ನು ರಾಜಕೀಯವಾಗಿ ತುಳಿದರೂ ನಾನು ಎದುಗುಂದುವುದಿಲ್ಲ’ ಎಂದರು.

ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ ಮಜ್ಜಿಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ, ಮುಖಂಡರಾದ ಹನುಮಂತಪ್ಪ ಹನುಮಾಪುರ, ರವಿ ಪಾಟೀಲ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.