ADVERTISEMENT

ನಮ್ಮ ಪಕ್ಷದವರಿಂದಲೇ ಸ್ವಾಭಿಮಾನಕ್ಕೆ ಧಕ್ಕೆ: ಸಂಸದ ಸಂಗಣ್ಣ ಕರಡಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 10:00 IST
Last Updated 4 ನವೆಂಬರ್ 2023, 10:00 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ಪಡೆದುಕೊಳ್ಳಲು ಹಿಂದೆ ನಮ್ಮದೇ ಬಿಜೆಪಿ‌ ಸರ್ಕಾರ ಇದ್ದರೂ ಸಾಧ್ಯವಾಗಲಿಲ್ಲ. ನಮ್ಮ ಸಚಿವರು ಸ್ಪಂದಿಸಲಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಾಮಗಾರಿಗೆ ಶನಿವಾರ ನಡೆದ ಭೂಮಿ ಪೂಜಾ ಕಾರ್ಯಕ್ರಮದ ವೇಳೆ ಬೇಸರ ಹೊರಹಾಕಿದ ಅವರು

ಹಿಂದೆ ನಮ್ಮ ಸರ್ಕಾರ ಇದ್ದರೂ ಕೋರ್ಟ್ ಕಟ್ಟಡ ಮಾಡಲಾಗಲಿಲ್ಲ. ಆಗ ಸಚಿವರಾಗಿದ್ದ ಸಿ.ಸಿ.ಪಾಟೀಲ ಹಾಗೂ ಗೋವಿಂದ ಕಾರಜೋಳ ಬಳಿ ಹೋದರೂ ಕೆಲಸ‌ವಾಗಲಿಲ್ಲ. ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು ಎಂದರು.

ADVERTISEMENT

ಆದರೆ ಪಕ್ಷದ ಚೌಕಟ್ಟಿನಲ್ಲಿ ಇರುವ ಕಾರಣ ಏನು ಮಾತನಾಡಲು ಆಗಿಲ್ಲ. ಈ‌ ರೀತಿಯ ಬೆಳವಣಿಗೆಯಾದಾಗ ಒಮ್ಮೊಮ್ಮೆ ಪಕ್ಷದಿಂದ ಹೊರ ಬರಬೇಕು ಅನಿಸುತ್ತದೆ ಎಂದರು.

ನಮ್ಮ ಜಿಲ್ಲೆಯ ವಕೀಲರು ಪಿಐಎಲ್ ಹಾಕಿದ ಬಳಿಕ ನ್ಯಾಯಾಲಯ ‌ಸಂಕೀರ್ಣದ ಭೂ ಸ್ವಾಧೀನದ ಹಣ ಬಂದಿದ್ದು ದುರಂತ. ಈ‌ ಎಲ್ಲಾ ಏರುಪೇರು ಬಳಿಕ ನ್ಯಾಯಾಲಯ ಸಂಕೀರ್ಣದ ಭೂಮಿಪೂಜೆ ನೆರವೇರಿದ್ದು ಖುಷಿ ನೀಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.