ADVERTISEMENT

ಕನಕಗಿರಿ: ಕವಿತಾಗೆ ಒಲಿದು ಬಂದ ಅಧ್ಯಕ್ಷ ಹುದ್ದೆ!

ಸೂಳೇಕಲ್ ಗ್ರಾಮ ಪಂಚಾಯಿತಿ ಎಸ್‌ಟಿ ಮಹಿಳೆಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 13:53 IST
Last Updated 17 ಜೂನ್ 2023, 13:53 IST
ಕವಿತಾ ಶಿವಲಿಂಗಪ್ಪ ಅಳ್ಳಳ್ಳಿ
ಕವಿತಾ ಶಿವಲಿಂಗಪ್ಪ ಅಳ್ಳಳ್ಳಿ    

ಕನಕಗಿರಿ: ತಾಲ್ಲೂಕಿನ 11 ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.‌ಸುಂದರೇಶ ಬಾಬು ಅವರ ಸಮ್ಮುಖದಲ್ಲಿ ಶನಿವಾರ ನಡೆದ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಸೂಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಕೇರಿ ಗ್ರಾಮದ ಸದಸ್ಯೆ ಕವಿತಾ ಶಿವಲಿಂಗಪ್ಪ ಅಳ್ಳಳ್ಳಿ ಅವರಿಗೆ ಅಧ್ಯಕ್ಷ ಸ್ಥಾನದ ಹುದ್ದೆ ಒಲಿದು ಬಂದಿದೆ.

ಒಟ್ಟು 17 ಸದಸ್ಯರಲ್ಲಿ ಹಲವರು ಅಧ್ಯಕ್ಷ ಸ್ಥಾನದ ಮೀಸಲಾತಿ ಈ ಸಲ ತಮ್ಮ ಪ್ರವರ್ಗಕ್ಕೆ ಬರುತ್ತದೆ ಎನ್ನುವ ಭಾರಿ ನಿರೀಕ್ಷೆಯೊಂದಿಗೆ ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ 1993ರಿಂದ 2022ರ ವರೆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮಿಸಲಾತಿ‌ ನಿಗದಿ ಕುರಿತು ಮಾಹಿತಿ ನೀಡಿದರು. 11 ಗ್ರಾಮ‌ ಪಂಚಾಯಿತಿಯಲ್ಲಿ‌ 3 ಗ್ರಾಮ ಪಂಚಾಯಿತಿಗಳು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾಗಿವೆ ಎಂದು ಘೋಷಿಸಿದರು. ಸೂಳೇಕಲ್‌ ಗ್ರಾ.ಪಂ.ಯಲ್ಲಿ ಎಸ್‌ಟಿ ಸಮುದಾಯಕ್ಕೆ ಮಹಿಳಾ ಸದಸ್ಯೆ ಇರುವುದು ಕವಿತಾ ಮಾತ್ರ. ಹೀಗಾಗಿ ಅವರ ಅನಾಯಸವಾಗಿ ಅಧ್ಯಕ್ಷೆಯಾಗುವ ಅದೃಷ್ಟ ಒದಗಿ ಬಂತು. 

ADVERTISEMENT

ಇದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ತಮ್ಮ ಬೆಂಬಲಿಗರನ್ನು ಪ್ರವಾಸಕ್ಕೆ ಕಳಿಸಿರುವುದು ಗೊತ್ತಾಗಿದ್ದು ಮೀಸಲಾತಿ ಘೋಷಣೆಯಿಂದ ನಿರಾಶೆಗೊಂಡು ಮತ್ತೆ ಊರಿಗೆ ಕರೆಸಿದರು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.