ADVERTISEMENT

ಅಳವಂಡಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 9:29 IST
Last Updated 21 ಆಗಸ್ಟ್ 2023, 9:29 IST
ಅಳವಂಡಿ ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅನಾವರಣಗೊಳಿಸಿದರು
ಅಳವಂಡಿ ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅನಾವರಣಗೊಳಿಸಿದರು   

ಅಳವಂಡಿ: ‘ಯುವಕರು ದೇಶಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೋರಾಟ ಮನೋಭಾವ, ದೇಶಪ್ರೇಮ ಹಾಗೂ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ’ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನಾವರಣಗೊಳಿಸಿ ಭಾನುವಾರ ಮಾತನಾಡಿದರು.

ಹಾಲವರ್ತಿಯ ಕನಕ ಗುರುಪೀಠದ ಶಿವಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ‘ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಯೋಧ. ನಾವು ಹುತಾತ್ಮರನ್ನು ಮರೆಯಬಾರದು ಅವರನ್ನು ಸದಾ ಸ್ಮರಿಸಬೇಕು ಹಾಗೂ ಸಂಗೊಳ್ಳಿ ರಾಯಣ್ಣನವರ ದೇಶಭಕ್ತ, ಸ್ವಾಮಿಭಕ್ತಿ ಹೊರಾಟ ಮನೋಭಾವ ಇಂದಿನ ಪಿಳೀಗೆಗೆ ಭದ್ರ ಬುನಾದಿಯಾಗಿದೆ. ಯುವಕರು ಕೂಡ ದುಶ್ಚಟಗಳಿಗೆ ದಾಸರಾಗದೆ ಜೀವನದ ಗುರಿಯನ್ನು ತಲುಪಲು ಪರಿಶ್ರಮದಿಂದ ಜೀವನ ಕಟ್ಟಿಕೊಳ್ಳಿ’ ಎಂದರು.

ADVERTISEMENT

ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ, ತಹಶೀಲ್ದಾರ್ ವಿಠ್ಠಲ ಚೌಗಲೆ, ತಾ.ಪಂ ಇಒ ದುಂಡೇಶ ತುರಾದಿ, ಪ್ರಮುಖರಾದ ಭರಮಪ್ಪ ನಗರ, ವಿರುಪಣ್ಣ ಮೋರನಾಳ, ಬೀಮೇಶಪ್ಪ ಹವಳಣ್ಣವರ, ಶಿವಣ್ಣ ಮೋರನಾಳ, ಬಸವರಡ್ಡೆಪ್ಪ ಹಳ್ಳಿಕೇರಿ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ನಿಂಗಪ್ಪ ಬೂದಿಹಾಳ, ಚಂದ್ರಪ್ಪ ಹುಳ್ಳಿ, ಹನುಮಂತ ಸಾವುಕಾರ, ಯಲ್ಲಪ್ಪ ದಳಪತಿ, ಅಂದಪ್ಪ ಮಾಗಳದ, ಗಂಗಮ್ಮ ಶಿವಪ್ಪ ಸೊಂಪುರ, ಕರಿಯಪ್ಪ ವಡ್ಡಟ್ಟಿ, ಹನುಮಂತ, ಅಂದಪ್ಪ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.