ADVERTISEMENT

ಕೊಪ್ಪಳ ನಗರಸಭೆ ಉಪಚುನಾವಣೆ; 50 ಮತಗಳಿಂದ ಗೆದ್ದ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:19 IST
Last Updated 26 ನವೆಂಬರ್ 2024, 4:19 IST
<div class="paragraphs"><p>ಕವಿತಾ ಗಾಳಿ - ರಾಜಶೇಖರ ಆಡೂರು</p></div>

ಕವಿತಾ ಗಾಳಿ - ರಾಜಶೇಖರ ಆಡೂರು

   

ಕೊಪ್ಪಳ: ಇಲ್ಲಿನ ನಗರಸಭೆಯ ಎರಡು ವಾರ್ಡ್‌ಗಳ ಉಪಚುನಾವಣೆಯ ಮತಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ ಅಭ್ಯರ್ಥಿ ಎಂಟನೇ ವಾರ್ಡ್‌ನಲ್ಲಿ 50 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ.

ಮಹಿಳೆಗೆ ಮೀಸಲಾಗಿದ್ದ 8ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಚಲಾವಣೆಯಾಗಿದ್ದ ಒಟ್ಟು 928 ಮತಗಳಲ್ಲಿ 486 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ 436 ಮತಗಳನ್ನು ಪಡೆದುಕೊಂಡರು. ಆರು ಮತಗಳು ನೋಟಾಕ್ಕೆ ಬಂದಿವೆ. ಎಂಟನೇ ವಾರ್ಡ್‌ಗೆ ಹಿಂದೆ ಸದಸ್ಯೆಯಾಗಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿಗೆ ನೇಮಕವಾಗಿದ್ದರಿಂದಈ ಸ್ಥಾನ ತೆರವಾಗಿತ್ತು.

ADVERTISEMENT

ಸ್ಥಾನ ಉಳಿಸಿಕೊಂಡ ಆಡೂರ: ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ರಾಜಶೇಖರ ಆಡೂರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ರಾಜಶೇಖರ ಹಿಂದೆ ಇದೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸದಸ್ಯರಾಗಿದ್ದರು.

ಈ ವಾರ್ಡ್‌ನಲ್ಲಿ ಚಲಾವಣೆಯಾದ ಒಟ್ಟು 707 ಮತಗಳಲ್ಲಿ ಆಡೂರು 517 ಮತಗಳನ್ನು ಪಡೆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಚನ್ನಬಸಪ್ಪ ಗವಿಸಿದ್ದಪ್ಪ ಗಾಳಿ 165 ಮತಗಳನ್ನು ಗಳಿಸಿದರು. ನೋಟಾಕ್ಕೆ 25 ಮತಗಳು ಬಂದಿವೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.