ಕೊಪ್ಪಳ: ಇಲ್ಲಿನ ನಗರಸಭೆಯ ಎರಡು ವಾರ್ಡ್‌ಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಶನಿವಾರ ಬೆಳಿಗ್ಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನವಾದರೂ ಮಂದಗತಿಯಲ್ಲಿ ಸಾಗಿದೆ.
ಮಹಿಳೆಗೆ ಮೀಸಲಾಗಿರುವ 8ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ಕವಿತಾ ಬಸವರಾಜ ಗಾಳಿ, ಕಾಂಗ್ರೆಸ್ ಹುರಿಯಾಳು ಆಗಿ ರೇಣುಕಾ ಕಲ್ಲಾಕ್ಷಪ್ಪ ಪೂಜಾರ, 11ನೇ ವಾರ್ಡ್‌ನ ಬಿಜೆಪಿಯಿಂದ ಚನ್ನಬಸಪ್ಪ ಗವಿಸಿದ್ದಪ್ಪ ಗಾಳಿ ಹಾಗೂ ಕಾಂಗ್ರೆಸ್‌ನಿಂದ ಆಡೂರು ರಾಜಶೇಖರ ಕಣದಲ್ಲಿದ್ದಾರೆ.
ಮಧ್ಯಾಹ್ನ 12 ಗಂಟೆ ಹೊತ್ತಿಗೆ ಎಂಟನೇ ವಾರ್ಡ್‌ನಲ್ಲಿ ಶೇ 20.4, ಹನ್ನೊಂದನೆ ವಾರ್ಡ್‌ನಲ್ಲಿ ಶೇ 24.8ರಷ್ಟು ಮತದಾನವಾಗಿದೆ.
11ನೇ ವಾರ್ಡ್‌ನಿಂದ ಬಿಜೆಪಿಯಿಂದ ಸದಸ್ಯರಾಗಿದ್ದ ಆಡೂರು ರಾಜಶೇಖರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಈಗ ಅದೇ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ. ಎಂಟನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿಗೆ ನೇಮಕವಾಗಿದ್ದರಿಂದ ತಮ್ಮ ಸದಸ್ವತ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.
8ನೇ ವಾರ್ಡ್‌ನಲ್ಲಿ 1,407 ಹಾಗೂ ಹನ್ನೊಂದನೇ ವಾರ್ಡ್‌ನಲ್ಲಿ 1,067 ಮತದಾರರು ಇದ್ದಾರೆ. 26ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.