ADVERTISEMENT

ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ: ಚನ್ನಮ್ಮ ಗೌಡ್ರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:04 IST
Last Updated 30 ಜೂನ್ 2024, 14:04 IST
ಯಲಬುರ್ಗಾ ತಾಲ್ಲೂಕು ಮಂಡಲಮರಿ ಗ್ರಾಮದ ಹೊರವಲಯದ ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಯಲಬುರ್ಗಾ ತಾಲ್ಲೂಕು ಮಂಡಲಮರಿ ಗ್ರಾಮದ ಹೊರವಲಯದ ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಯಲಬುರ್ಗಾ: ‘ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಮುಖ್ಯ. ವನಗಳ ಅಭಿವೃದ್ಧಿಯ ಮೂಲಕ ಪೂರಕ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ಬದ್ಧರಾಗಬೇಕಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕಿ ಚನ್ನಮ್ಮ ಗೌಡ್ರ ಹೇಳಿದರು.

ತಾಲ್ಲೂಕಿನ ಮಂಡಲಮರಿ ಗ್ರಾಮದ ಹೊರವಲಯದಲ್ಲಿ ಸಂಸ್ಥೆಯ ವತಿಯಿಂದ ನಮ್ಮೂರು- ನಮ್ಮ ಕೆರೆ ಯೋಜನೆ ಅಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೆರೆಯ ಸುತ್ತಮುತ್ತ ಸಾಕಷ್ಟು ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಬೆಳೆಸಿದರೆ ಪ್ರಾಣಿ, ಪಕ್ಷಗಳಿಗೆ ಅನುಕೂಲವಾಗಲಿದೆ. ತಾಪಮಾನವೂ ಕಡಿಮೆಯಾಗುತ್ತದೆ’ ಎಂದು ಹೇಳಿದರು.

ಮಕ್ಕಳ್ಳಿ ಶಿವಾನಂದಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಾಮಜಮುಖಿ ಕಾರ್ಯಗಳನ್ನು ಶ್ಲಾಘೀಸಿದರು. 

ADVERTISEMENT

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪತ್ತಾರ, ಸಂಸ್ಥೆಯ ತಾಲ್ಲೂಕು ವ್ಯವಸ್ಥಾಪಕ ಸತೀಶ ಗಾಂವಕರ ಮಾತನಾಡಿದರು.

ಕೃಷಿ ವಿಭಾಗದ ಮೇಲ್ವಿಚಾರಕ ಪ್ರಸನ್ನಕುಮಾರ, ಗ್ರಾಮ ಪಂಚಾಯಿತಿ ಸದಸ್ಯ ಸೋಮಲಿಂಗಪ್ಪ ಕುರಿ, ಮುಖಂಡ ಈರಪ್ಪ ಮುಂಡರಗಿ, ಯಮನೂರಪ್ಪ ಕಾಗಿ, ಬಸವರಾಜ ಮುಂಡರಗಿ, ಮೌನೇಶ ಬಡಿಗೇರ, ನೀಲಪ್ಪ, ವೀರನಗೌಡ ಪೊಲೀಸ್‍ಪಾಟೀಲ, ಯಮನಪ್ಪ ಹೊಸಮನಿ, ರಂಗಪ್ಪ ತೆಗ್ಯಾಳ, ನೀರುಪಾದಿ ಮಕ್ಕಳ್ಳಿ, ಶೇಖರಗೌಡ ಮಾಲಿ ಪಾಟೀಲ, ಮೈಲಾರಗೌಡ, ನಿಂಗಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.