ADVERTISEMENT

ಗಂಗಾವತಿ | ದಾಖಲೆ ಇಲ್ಲದೆ ಹಣ ಸಾಗಾಟ: ₹32.90 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 8:29 IST
Last Updated 19 ಮಾರ್ಚ್ 2024, 8:29 IST
   

ಗಂಗಾವತಿ (ಕೊಪ್ಪಳ): ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ತಹಶೀಲ್ದಾರ್ ಯು.ನಾಗರಾಜ ಅವರು ಜಪ್ತಿ ಮಾಡಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆಯಲಾಗಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನಿಂದ ಹೊಸಪೇಟೆಗೆ ಪೀರಸಾಬ್ ಎನ್ನುವ ವ್ಯಕ್ತಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಅನುಮಾನಗೊಂಡ ಸಿಬ್ಬಂದಿ ತಪಾಸಣೆ ನಡೆಸಿದಾಗ ಹಣಕ್ಕೆ ದಾಖಲೆಯಿಲ್ಲದೇ ಇರುವುದು ಗೊತ್ತಾಗಿದೆ.

ADVERTISEMENT

ದಾಖಲೆ ನೀಡುವಂತೆ ಕೇಳಿದಾಗ, ಹಣಕ್ಕೆ ದಾಖಲೆಗಳು ಇರಲಿಲ್ಲ. ಹಣ ಯಾರಿಗೆ ಸೇರಿದ್ದು, ಯಾವ ಕಾರಣಕ್ಕೆ ಸಾಗಿಸಲಾಗುತ್ತಿದೆ? ಎಂಬುದು ಗೊತ್ತಾಗಿಲ್ಲ. ವಿಚಾರಣೆ ನಡೆಸಲಾಗುತ್ತದೆ ಎಂದು ತಹಶೀಲ್ದಾರ್ ಯು.ನಾಗರಾಜ ಪ್ರಜಾವಾಣಿಗೆ ತಿಳಿಸಿದರು.

ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಶೇಖರ್ ಜುತ್ತಲ್ ಹಾಗೂ ಚೆಕ್ ಪೋಸ್ಟ್ ತಪಾಸಣಾ ಸಿಬ್ಬಂದಿ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.