ADVERTISEMENT

ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:00 IST
Last Updated 17 ಮೇ 2024, 6:00 IST
ಹನುಮಸಾಗರ ಎರಡು ಬೆಟ್ಟಗಳ ನಡುವೆ ಇರುವ ಕೆರೆ ಬರಿದಾಗಿರುವುದು
ಹನುಮಸಾಗರ ಎರಡು ಬೆಟ್ಟಗಳ ನಡುವೆ ಇರುವ ಕೆರೆ ಬರಿದಾಗಿರುವುದು   

ಹನುಮಸಾಗರ: ಕಳೆದ 3-4 ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ಗ್ರಾಮದಲ್ಲಿ ಬರದ ಜತೆ ಗುಳೆಯೂ ಮುಂದುವರಿದಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಕರೆ ಖಾಲಿಯಾಗಿದೆ. ಕೆರೆ, ಹಳ್ಳಗಳು ಬತ್ತಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರತೆ ಉಂಟಾಗಿದೆ. 

ಮಳೆಯ ಅಭಾವದಿಂದ ಕರೆ ಬತ್ತಿದ್ದು ಸುತ್ತಲಿನ ಅಂತರ್ಜಲ ಮಟ್ಟವೂ ಕುಸಿದಿದೆ. ಕೆರೆಯಲ್ಲಿ ಆಶ್ರಯ ಪಡೆದಿದ್ದ ಮೀನು, ಕಪ್ಪೆ, ಹಾವು ಹಾಗೂ ಇತರ ಜಲಚರಗಳಿಗೆ ಕಂಟಕ ಎದುರಾಗಿದೆ. ಎರಡು ಗುಡ್ಡಗಳ ನಡುವೆ ಇರುವ ಕರೆ ಬತ್ತಿದ್ದರಿಂದ ಕುರಿಗಾಹಿಗಳಿಗೆ, ಕುರಿಗಳಿಗೆ ಸೇರಿ ಕೃಷಿ ಕೆಲಸಕ್ಕೆ ಜಮೀನಿಗೆ ಬಂದ ರೈತರು ನಿರಿಗಾಗಿ ಪರದಾಡುವಂತಾಗಿದೆ.

ಕೆರೆಯಲ್ಲಿ ನಿಂತ ಅಲ್ಪಸ್ವಲ್ಪ ನೀರು ಕುಡಿಯಲು ಯೋಗ್ಯವಾಗಿಲ್ಲದಿದ್ದರೂ ಕೆರೆಯ ಪಕ್ಕದಲ್ಲಿರುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಾಯಕವಾಗಿತ್ತು.   ಇದರಿಂದ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿತ್ತು.

ADVERTISEMENT

‘ಕೆರೆಯ ಅಕ್ಕಪಕ್ಕ ಜಾಲಿ ಗಿಡ, ನಿರುಪಯುಕ್ತ ತ್ಯಾಜ್ಯ ಸಂಗ್ರಹವಾಗಿ ಕಸ ಬೆಳೆದಿದೆ. ನರೇಗಾ ಯೋಜನೆ ಅಡಿಯಲ್ಲಿ ಕರೆ ಸ್ವಚ್ಛಗೊಳಿಸಿದರೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ನಿರ್ವಹಣೆ ಇಲ್ಲದೆ ಹಾಳು ಬಿದ್ದ ಕೆರೆಗಳಿಗೆ ಸೂಕ್ತ ರಕ್ಷಣೆ ಒದಗಿಸಿ ಜೀವ ಜಲ ಉಳಿಸಿ ಬೆಳೆಸಬೇಕು’ ಎನ್ನುವುದು ಜನರ ಆಗ್ರಹ.

ಮಾಡಬೇಕಾದ ಕೆಲಸ: ನರೇಗಾ ಯೋಜನೆ ಮೂಲಕ ಕೆರೆಯಲ್ಲಿರುವ ಹೂಳು ತೆಗೆಯುವುದು. ಹೆಚ್ಚು ನೀರು ನಿಲ್ಲುವಂತೆ ತೆಗ್ಗು ಕುಣಿಕೆಗಳನ್ನು ಮಾಡುವುದು. ಮಣ್ಣಿನ ಸವಕಳಿ ತಡೆಗಟ್ಟಲು ಕ್ರಮವಹಿಸುವುದು. ದಂಡೆಯನ್ನು ಸರಿಯಾಗಿ ಪರಿಶೀಲಿಸಿ ಎಲ್ಲಾದರೂ ಬಿರುಕು ಬಿಟ್ಟಿದೆ ಎಂದು ನಿಗಾವಹಿಸುವುದು. ಕೆರೆಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಾಣಿಗಳು ಹೊಗದಂತೆ ಕ್ರಮವಹಿಸಬೇಕು. ಕರೆಯ ಸುತ್ತ ರಕ್ಷಣಾ ಬೇಲಿ ಅಳವಡಿಸುವುದು, ಕೆರೆಯಲ್ಲಿ ಬಟ್ಟೆ ತೊಳೆಯುವುದು, ಸಾಕು ಪ್ರಾಣಿಗಳ ಮೈ ತೊಳೆಯುವುದನ್ನು ತಡೆಯಬೇಕು. 

ಮಳೆ ತಂದ ಸಂತಸ: ಮಂಗಳಾವರ ತಡರಾತ್ರಿ ಸುರಿದ ಮಳೆಯಿಂದ ಜನರಿಗೆ ಮತ್ತು ರೈತರಿಗೆ ಸಂತಸ ಉಂಟು ಮಾಡಿದೆ. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆ ತಂಪು ನೀಡಿದೆ.

ಹನುಮಸಾಗರ ಕರೆಯ ವಿಹಂಗಮ ನೋಟ
ನೀರಿನ ಕೊರತೆಯಿಂದ ಬಿರುಕು ಬಿಟ್ಟಿರುವುದು
ಕೆರೆಯಲ್ಲಿ ನಿರುಪಯುಕ್ತ ಗಿಡಗಳು ಮುಳ್ಳಿ ಪೊದೆಗಳು ಬೆಳೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.