ಕನಕಗಿರಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾಲುಮತ ಕುರುಬ ಸಮಾಜದ ವತಿಯಿಂದ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಭಕ್ತ ಕನಕದಾಸ ವೃತ್ತದಲ್ಲಿ ಪೂಜೆ ಸಲ್ಲಿಸಿ ರಾಯಣ್ಣನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮಹಿಳೆಯರು ಕುಂಭ, ಕಳಸದೊಂದಿಗೆ ಭಾಗವಹಿಸಿದ್ದರು. ಡೊಳ್ಳು ಕುಣಿತ, ಡಿಜೆ ಕುಣಿತ ಗಮನ ಸೆಳೆದವು. ಕನಕದಾಸ ವೃತ್ತದಿಂದ ಆರಂಭವಾದ ರಾಯಣ್ಣನ ಭಾವಚಿತ್ರದ ಮೆರವಣಿಗೆ ರಾಜಬೀದಿ, ವಾಲ್ಮೀಕಿ ವೃತ್ತದ ಮೂಲಕ ರಾಯಣ್ಣನ ವೃತ್ತದವರೆಗೆ ವಿಜೃಂಭಣೆಯಿಂದ ನಡೆಯಿತು.
ಬಸಾಪಟ್ಟಣದ ಹಾಲುಮತ ಸಮಾಜದ ಗುರುಗಳಾದ ಸಿದ್ದರಾಮಯ್ಯ ಗುರುವಿನ, ಹಾಲುಮತ ಸಮಾಜದ ಅಧ್ಯಕ್ಷ ನಾಗಪ್ಪ ಹುಗ್ಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ, ತಾ.ಪಂ. ಮಾಜಿ ಅಧ್ಯಕ್ಷ ಹೊನ್ನೂರುಸಾಬ ಮೇಸ್ತ್ರೀ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಶರಣಬಸಪ್ಪ ಭತ್ತದ, ದೇವರಾಜ ಮಂಗಳೂರು, ಮಹಾಂತೇಶ ಸಜ್ಜನ್, ಖಾದರಬಾಷ ಗುಡಿಹಿಂದಲ, ಮದರಸಾಬ ಸಂತ್ರಾಸ್, ಗಂಗಾಧರ ಚೌಡ್ಕಿ, ರವಿ ಪಾಟೀಲ,ಸಣ್ಣ ಕನಕಪ್ಪ, ಪ.ಪಂ. ಸದಸ್ಯರಾದ
ಸಂಗಪ್ಪ ಸಜ್ಜನ್, ನೂರಸಾಬ ಗಡ್ಡಿಗಾಲ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.