ಕಾರಟಗಿ: ‘ಸಹೋದರ ಪಿಎಸ್‌ಐ ಪರಶುರಾಮ್ ಯಾದಗಿರಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟು ಐದು ದಿನಗಳಾದರೂ ಆರೋಪಿಗಳನ್ನು ಬಂಧಿಸದೇ ಗೃಹ ಸಚಿವರು ನಮಗೆ ಸಾಂತ್ವನ ಹೇಳಲು ಬರುತ್ತಿರುವುದು ಸರಿಯೇ’ ಎಂದು ಪರಶುರಾಮ್ ಅವರ ಸಹೋದರ ಹನುಮಂತಪ್ಪ ಪ್ರಶ್ನಿಸಿದರು.
ಗೃಹ ಸಚಿವ ಜಿ.ಪರಮೇಶ್ವರ ಬುಧವಾರ ಪರಶುರಾಮ್ ಅವರ ಹುಟ್ಟೂರು ಸೋಮನಾಳ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಹೋದರನ ಸಾವಿನ ಪ್ರಕರಣದಲ್ಲಿ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಹೆಸರು ಇದೆ. ಜಾತಿನಿಂದನೆ ಪ್ರಕರಣವೂ ದಾಖಲಾಗಿದೆ. ಗೃಹಸಚಿವರು ನಮ್ಮೂರಿಗೆ ಬರಲು ವಿರೋಧವಿಲ್ಲ. ಬರುವ ಮೊದಲು ಆರೋಪಿಗಳನ್ನು ಬಂಧಿಸಬೇಕು. ಒಂದು ವೇಳೆ ಹಾಗೆಯೇ ಬಂದರೆ ಖಂಡಿಸುತ್ತೇವೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರು ಆರೋಪಿಗಳನ್ನು ಜೊತೆಯಲ್ಲಿ ಕೂರಿಸಿಕೊಂಡು ನಮಗೆ ಸಾಂತ್ವನ ಹೇಳುವುದು ಸರಿಯೇ’ ಎಂದು ಪ್ರಶ್ನಿಸಿದರು.
ಒಂದು ತಿಂಗಳು ವೇತನ: ಮಂಗಳವಾರ ಸಾಂತ್ವನ ಹೇಳಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಮ್ಮ ಒಂದು ತಿಂಗಳ ವೇತನ ₹60 ಸಾವಿರ ಚೆಕ್ ಪರಶುರಾಮ್ ಪತ್ನಿ ಶ್ವೇತಾ ಅವರಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.