ADVERTISEMENT

ಯಲಬುರ್ಗಾ | ಮಣ್ಣೆತ್ತಿನ ಅಮವಾಸ್ಯೆ: ಮಕ್ಕಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:53 IST
Last Updated 5 ಜುಲೈ 2024, 15:53 IST
ಯಲಬುರ್ಗಾ ಪಟ್ಟಣದಲ್ಲಿ ಮಕ್ಕಳು ಗೆಜ್ಜೆಸರ ಹಾಕಿಕೊಂಡು ಮನೆ ಮನೆಗೆ ತೆರಳಿ ಕರಿಹರಿಯುವ ಕಾರ್ಯಕ್ರಮಕ್ಕಾಗಿ ಧವಸ ಧಾನ್ಯಗಳನ್ನು ಸಂಗ್ರಹಿಸಿದರು
ಯಲಬುರ್ಗಾ ಪಟ್ಟಣದಲ್ಲಿ ಮಕ್ಕಳು ಗೆಜ್ಜೆಸರ ಹಾಕಿಕೊಂಡು ಮನೆ ಮನೆಗೆ ತೆರಳಿ ಕರಿಹರಿಯುವ ಕಾರ್ಯಕ್ರಮಕ್ಕಾಗಿ ಧವಸ ಧಾನ್ಯಗಳನ್ನು ಸಂಗ್ರಹಿಸಿದರು   

ಯಲಬುರ್ಗಾ: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ  ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆ, ಬೆಳೆಗೆ ರೈತರು ಪ್ರಾರ್ಥಿಸಿದರು.

ಕೆಲವರು ಮನೆಯಲ್ಲಿಯೇ ಎತ್ತುಗಳನ್ನು ತಯಾರಿಸಿ ಪೂಜಿಸಿದರೆ ಇನ್ನೂ ಕೆಲವರು ಬಡಿಗೇರ, ಕುಂಬಾರ ಮನೆಗಳಲ್ಲಿ ತಯಾರಿಸಿದ ಎತ್ತುಗಳನ್ನು ಖರೀದಿಸಿ ಪೂಜೆ ಮಾಡಿದರು.

ವಿವಿಧ ಓಣಿಯ ಮಕ್ಕಳು ಮನೆ ಮನೆಗೆ ತೆರಳಿ ಧವನ ಧಾನ್ಯಗಳನ್ನು ಸಂಗ್ರಹಿಸಿ ಕರಗಲ್ಲು ತೋಡಿ ಪೂಜೆ ಮಾಡಿ ಕರಿಹರಿಯುವ ಕಾರ್ಯ ಮಾಡುವುದು ಅಲ್ಲಲ್ಲಿ ಕಂಡು ಬಂತು.

ADVERTISEMENT

ಸಂಜೆ ನಡೆಯುವ ಈ ಕಾರ್ಯವನ್ನು ಮಕ್ಕಳೇ ನಿರ್ವಹಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆ ಹೊತ್ತಿನಲ್ಲಿ ಕೊರಳಲ್ಲಿ ಗೆಜ್ಜೆ ಕಟ್ಟಿಕೊಂಡು ಧವನ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಬಳಿಕ ಕರಗಲ್ಲಿನ ಹತ್ತಿರ ಕರಿ ಹರಿದು ಸಂಭ್ರಮಿಸುತ್ತಾರೆ. ನಂತರ ತಿಂಡಿ ತಿನ್ನಿಸು ಮಾಡಿ ಸಹಭೋಜನ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.