ಗಂಗಾವತಿ: ಸಿಪಿಐಎಂಎಲ್ ಪಕ್ಷವು ಕ್ರಾಂತಿಕಾರಿ ಪಕ್ಷವಾಗಿದ್ದು, 1992 ರವರೆಗೆ ಭೂಗತವಾಗಿದ್ದು, ಡಿ.25, 1992 ರಂದು ಬಹಿರಂಗ ಪಕ್ಷವಾಗಿ ಜನರ ಮಧ್ಯೆ ಬಂದಿದ್ದು, ಪ್ರತಿವರ್ಷ ಡಿಸೆಂಬರ್ 25 ರಂದು ಮನುಸ್ಮೃತಿ ಸುಡಲಾಗುತ್ತಿದೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಣ್ಣ
ಹನುಮಂತಪ್ಪ ಹೇಳಿದರು.
ನಗರದ ಸಿಪಿಐಎಂಎಲ್ ಲಿಬರೇಷನ್ ಕಾರ್ಯಾಲಯದ ಮುಂದೆ ಮನುಸ್ಮೃತಿಯನ್ನು ಸುಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1927 ರಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟು, ಹಿಂದುಳಿದ ಜನರು ಮನುಸ್ಮೃತಿಯಿಂದ ಪಡುತ್ತಿರುವ ಕಷ್ಟಗಳನ್ನು, ಶೋಷಣೆಗಳನ್ನು ಇಡೀ ಜಗತ್ತಿಗೆ ತಿಳಿಸಿದರು ಎಂದು
ಹೇಳಿದರು.
ಹಿರಿಯ ಮುಖಂಡ ಜೆ.ಭಾರಧ್ವಾಜ್ ಮಾತನಾಡಿದರು. ಪಾಮಣ್ಣ ಅರಳಿಗನೂರು, ಸುಬಾನ್ ಎಸ್.ಎಫ್.ಐ, ಕವಿತಾ ಶೌಕತ್‍ಸಾಬ, ನೂರ ಹುಸೇನ್, ದಾದು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.