ADVERTISEMENT

VIDEO | ರೈತನ ಬದುಕು ಬದಲಿಸಿದ ಕೊಳೆತ ಲಿಂಬೆ: ಯುವ ರೈತನ ಸಾಹಸದ ಕತೆ ಇದು

ಪ್ರಜಾವಾಣಿ ವಿಶೇಷ
Published 20 ಜುಲೈ 2024, 12:25 IST
Last Updated 20 ಜುಲೈ 2024, 12:25 IST

ಕೊಪ್ಪಳ ಜಿಲ್ಲೆ ಕಲಕೇರಿ ಗ್ರಾಮದ ಯುವಕ ವೀರಭದ್ರಪ್ಪ ಘಂಟಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಲಿಂಬೆ ಬೆಳೆದಿದ್ದಾರೆ. ಲಿಂಬೆ ಬೆಳೆಯುವ ರೈತರು ಸಾಮಾನ್ಯವಾಗಿ ಈ ಬೆಳೆಗೆ ಹೆಸರಾದ ವಿಜಯಪುರ ಅಥವಾ ಬೇರೆ ಜಿಲ್ಲೆಗಳಿಂದ ಸಸಿ ತಂದು ತಮ್ಮ ತೋಟದಲ್ಲಿ ನೆಡುತ್ತಾರೆ. ಆದರೆ ವೀರಭದ್ರಪ್ಪ ಇನ್ನೊಬ್ಬರ ಮೇಲೆ ಅವಲಂಬನೆ ಏಕೆ ಎಂದುಕೊಂಡು ಕೊಳೆತ ಲಿಂಬೆಹಣ್ಣುಗಳನ್ನು ಒಂದೆಡೆ ಕೂಡಿಟ್ಟು ಅವುಗಳ ಬೀಜಗಳನ್ನು ಒಣಗಿಸಿ ತಾವೇ ಸಸಿ ತಯಾರು ಮಾಡಿದ್ದಾರೆ. ಒಮ್ಮೆ ನಾಟಿ ಮಾಡಿದ ಗಿಡದ ಫಸಲು ಕನಿಷ್ಠ 20ರಿಂದ 25ವರ್ಷದ ತನಕ ಸವಿಯುವ ರೀತಿಯಲ್ಲಿ ಕೃಷಿ ಪದ್ಧತಿ ರೂಢಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.