ADVERTISEMENT

ಅಧಿವೇಶನ ಮುಗಿಯುವ ತನಕವಾದರೂ ಸರ್ಕಾರ ಉಳಿಯಲಿ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 12:38 IST
Last Updated 22 ನವೆಂಬರ್ 2024, 12:38 IST
<div class="paragraphs"><p>ಜನಾರ್ದನ ರೆಡ್ಡಿ</p></div>

ಜನಾರ್ದನ ರೆಡ್ಡಿ

   

ಕೊಪ್ಪಳ: ನಿತ್ಯ ಸಂಕಷ್ಟ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಅಧಿಕಾರ ಕಳೆದುಕೊಳ್ಳಬಹುದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ‘ನಾನು ಕಾಲಜ್ಞಾನ ಹೇಳಲು ಆಗುವುದಿಲ್ಲ. ಆದರೆ ಯಾವುದೇ ಸಮಯದಲ್ಲಾದರೂ ಸರ್ಕಾರ ಉರುಳಬಹುದು ಎನ್ನುವುದಂತೂ ನಿಶ್ಚಿತ. ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಿರುವ ಕಾರಣ ಬೆಳಗಾವಿ ಅಧಿವೇಶನ ಮುಗಿಯುವ ತನಕವಾದರೂ ಸರ್ಕಾರ ಉಳಿಯಲಿ ಎನ್ನುವ ಆಸೆ ನನ್ನದು’ ಎಂದು ಲೇವಡಿ ಮಾಡಿದರು.

ADVERTISEMENT

‘ಉಪ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಾಕಷ್ಟು ಹಣ ಹಂಚಿದೆ. ಸೋಲಿನ ಭಯದಿಂದ ಚುನಾವಣೆ ಘೋಷಣೆಗೂ ಮೊದಲು ₹1,300 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದೆ. ಸಿದ್ದರಾಮಯ್ಯ ಮೂರು ದಿನ ಅಲ್ಲೇ ಇದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ’ ಎಂದರು.

‘ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಕ್ಫ್ ಆಸ್ತಿ ವಿರುದ್ದ ಹೋರಾಟ ನಡೆಯುತ್ತಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಚುನಾವಣೆಯ ಕಾರಣಕ್ಕೆ ಮೌಖಿಕವಾಗಿ ವಕ್ಫ್ ಆಸ್ತಿಗೆ ನೋಟಿಸ್ ಹಿಂಪಡೆಯುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಈ ಸರ್ಕಾರಕ್ಕೆ ರೈತರು ಹಾಗೂ ಮಠಾಧೀಶರ ಶಾಪ ತಟ್ಟದೆ ಇರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.