ಹನುಮಸಾಗರ: ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಂಭ್ರಮ, ಸಡಗರ ಆವರಿಸಿದೆ.
ಪೀರಾ ದೇವರುಗಳನ್ನು ಕೂಡಿಸುವುದು, ವಿಶಿಷ್ಠ ರೀತಿಯ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಹಲಗೆ ಬಾರಿಸುವುದು, ಹುಲಿ ಕುಣಿತ, ರಿವಾಯತ ಪದಗಳೂ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ.
ಹನುಮಸಾಗರದಲ್ಲಿ ಇಮಾಂ ಕಾಸೀಂ ಅಲಾಯಿ, ಸಣ್ಣ ಲಾಲಸಾಬ ಅಲಾಯಿ, ದೊಡ್ಡ ಲಾಲಸಾಬ ಅಲಾಯಿ, ಹುಸೇನಭಾಷಾ ಅಲಾಯಿ, ಹುನಗುಂದ ಲಾಲಸಾಬ ಅಲಾಯಿ, ಕೊರವರ ದುರುಗಪ್ಪನ ಅಲಾಯಿ, ಪತ್ತಾರ ಅಲಾಯಿ ಹೀಗೆ 8 ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ಪೀರಾ ದೇವರುಗಳನ್ನು ಕೂಡಿಸಲಾಗಿದೆ. ಶುಕ್ರವಾರ ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.