ADVERTISEMENT

ಅಳವಂಡಿ: ಕಾಲುಬಾಯಿ ರೋಗ ಲಸಿಕಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:55 IST
Last Updated 7 ಏಪ್ರಿಲ್ 2024, 15:55 IST
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಾನುವಾರಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲಾಯಿತು
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಾನುವಾರಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲಾಯಿತು   

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಜಾನುವಾರು ಅಧಿಕಾರಿ ಆರ್.ಸಿ. ಪಟ್ಟಣದ ಮಾತನಾಡಿ,‘ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆಗಳಲ್ಲಿ ಆರ್ಥಿಕತೆ ನಷ್ಟ ಉಂಟು ಮಾಡುವ ರೋಗವಾಗಿದೆ. ಹಾಗಾಗಿ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ತಪ್ಪದೇ ಹಾಕಿಸಬೇಕು’ ಎಂದರು.

ಪಶು ಇಲಾಖೆಯ ಸಿಬ್ಬಂದಿಗಳಾದ ಸೋಮಣ್ಣ ಮ್ಯಾಗಡೆ, ನಾಗರಾಜ್ ಡೊಳ್ಳಿನ, ಮಲ್ಲಯ್ಯ ಗುರುವಿನ, ನಿರ್ಮಲಾ ಪಾಟೀಲ, ರೈತರಾದ ಶಿವಪುತ್ರಪ್ಪ ಚಿಲವಾಡಗಿ, ಹುಸೇನಸಾಬ ಕಡೆಮನಿ, ಮಾರುತೆಪ್ಪ ಕುರ್ತಕೋಟಿ ಹಾಗೂ ಇತರರು ‍ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.